ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೌತ್ ಏಷ್ಯಾʼ ಗರಿ
ಈ ಪ್ರಶಸ್ತಿಯ ಗರಿಯು ವಿಮಾನ ನಿಲ್ದಾಣದ ಕುರಿತು ಪ್ರಯಾಣಿಕರಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಇದರಿಂದ ಭಾರತೀಯ ಮಟ್ಟಿಗೆ ಹೈದರಾಬಾದ್ ವಿಮಾನ ನಿಲ್ದಾಣವು ಪ್ರಯಾಣಿಕ ಸ್ನೇಹಿಯಾಗಿ ಗುರುತಿಸಿಕೊಂಡಂತಾಗಿದೆ.
ಹೈದರಾಬಾದ್ ವಿಮಾನ ನಿಲ್ದಾಣಕ್ಕೆ 2026ರ ʻಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೌತ್ ಏಷ್ಯಾʼ ಗರಿ ಮುಡಿಗೇರಿದೆ. ಐದನೆಯ ಬಾರಿ ಈ ಪುರಸ್ಕಾರ ಮುಡಿಗೇರಿಸಿಕೊಂಡ ಹಿರಿಮೆ ಹೈದರಾಬಾದ್ ವಿಮಾನ ನಿಲ್ದಾಣದ್ದಾಗಲಿದೆ. ಈಗಾಗಲೇ ʻಭಾರತ ಮತ್ತು ಸೌತ್ ಏಷ್ಯಾ ಭಾಗದ ಎರಡನೆಯ ಬೆಸ್ಟ್ ರೀಜನಲ್ ಏರ್‌ಪೋರ್ಟ್ʼ, ʻ ಸಮಗ್ರ ಭಾರತ ಮತ್ತು ಸೌತ್ ಏಷ್ಯಾದ ಮೂರನೆಯ ಬೆಸ್ಟ್ ಏರ್‌ಪೋರ್ಟ್ʼ ಪುರಸ್ಕಾರಗಳನ್ನು ಪಡೆದಿರುವ ವಿಮಾನ ನಿಲ್ದಾಣ ಇದಾಗಿದ್ದು, ಪ್ರಸ್ತುತ ಪುರಸ್ಕಾರವು ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ಪೋಣಿಸಿದಂತಾಗಿದೆ.
ಲಂಡನ್‌ನಲ್ಲಿ ನಡೆದ ʻಪ್ಯಾಸೆಂಜರ್ ಟರ್ಮಿನಲ್ ಎಕ್ಸ್‌ಪೋ -2026ʼ ಕಾರ್ಯಕ್ರಮದಲ್ಲಿ ಸ್ಕೈಟ್ರ್ಯಾಕ್ಸ್ ಸಂಸ್ಥೆಯು ಹೈದರಬಾದ್ ವಿಮಾನ ನಿಲ್ದಾಣಕ್ಕೆ ಈ ಪುರಸ್ಕಾರವನ್ನು ನೀಡಿದೆ.

ʼಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೌತ್ ಏಷ್ಯಾʼ ಪುರಸ್ಕಾರವು ಪ್ರಯಾಣಿಕರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೆಕ್-ಇನ್ ಮತ್ತು ಚೆಕ್-ಔಟ್ ಕಾರ್ಯಗಳು, ಸಿಬ್ಬಂದಿ ಸೇವೆ, ಟ್ರೇನ್ಡ್ ಸಿಬ್ಬಂದಿ, ಮಾಹಿತಿಗಾಗಿ ಚಾಟ್‌ಬಾಟ್‌ನಂಥ ತಂತ್ರಜ್ಞಾನ ಅಳವಡಿಕೆ ಸೇರಿ ಮತ್ತಿತರ ಕಾರ್ಯಗಳಲ್ಲಿ ಪ್ರಯಾಣಿಕರಿಗೆ ತ್ವರಿತ ಮತ್ತು ಗುಣಮಟ್ಟದ ಸೇವೆ ಒದಗಿಸುವುದನ್ನು ಆಧರಿಸಿದೆ.
ಈ ಪ್ರಶಸ್ತಿಯು ವಿಮಾನ ನಿಲ್ದಾಣದ ಕುರಿತು ಪ್ರಯಾಣಿಕರಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲು ಸಹಕಾರಿಯಾಗಲಿದೆ. ಇದರಿಂದ ಭಾರತೀಯ ಮಟ್ಟಿಗೆ ಹೈದರಾಬಾದ್ ವಿಮಾನ ನಿಲ್ದಾಣವು ಪ್ರಯಾಣಿಕ ಸ್ನೇಹಿಯಾಗಿ ಗುರುತಿಸಿಕೊಂಡಂತಾಗಿದೆ.
ಈ ಕುರಿತು ವಿಮಾನ ನಿಲ್ದಾಣದ ಸಿಇಒ ಪ್ರದೀಪ್ ಪಣಿಕ್ಕರ್ ಮಾತನಾಡಿದ್ದು, ʻಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಮತ್ತು ಸೌತ್ ಏಷ್ಯಾʼ ಪ್ರಶಸ್ತಿ ಪುರಸ್ಕಾರವು ಹೈದರಾಬಾದ್ ವಿಮಾನ ನಿಲ್ದಾಣದ ಉತ್ಕೃಷ್ಟ ಸೇವಾ ಸಂಸ್ಕೃತಿಯನ್ನು, ಉದ್ಯೋಗಿಗಳು ಮತ್ತು ಪಾಲುದಾರರ ವೃತ್ತಿಪರತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.