Thursday, October 8, 2026
Thursday, October 8, 2026

ವಂತಾರಾದಿಂದ ಹೊಸ ವಿಶ್ವವಿದ್ಯಾಲಯ

ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ನೇತೃತ್ವದಲ್ಲಿ ವಂತಾರಾ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಲಿದ್ದು, ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಗಳಿಗೆ ಈ ವಿಶ್ವವಿದ್ಯಾಲಯವನ್ನು ಜಾಗತಿಕ ಕೇಂದ್ರವಾಗಿ ರೂಪಿಸಲು ಯೋಜಿಸಲಾಗಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಜ್ಞಾನಕ್ಕಾಗಿ ವಿಶ್ವದ ಮೊದಲ ಜಾಗತಿಕ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ವಂತಾರಾ ಅಡಿಗಲ್ಲು ಹಾಕಿದೆ.

ರಿಲಯನ್ಸ್ ಇಂಡಸ್ಟ್ರೀಸ್ನ ಮಾಲೀಕತ್ವದ ವನ್ಯಜೀವಿ ಸಂರಕ್ಷಣೆ ಸಂಸ್ಥೆ ʻವಂತರಾʼ, ಗುಜರಾತ್‌ನ ಜಾಮ್‌ನಗರದಲ್ಲಿ ಮೊದಲ ಜಾಗತಿಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ನೇತೃತ್ವದಲ್ಲಿ ವಂತಾರಾ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸಲಿದ್ದು, ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನಗಳಿಗೆ ಈ ವಿಶ್ವವಿದ್ಯಾಲಯವನ್ನು ಜಾಗತಿಕ ಕೇಂದ್ರವಾಗಿ ರೂಪಿಸಲು ಯೋಜಿಸಲಾಗಿದೆ.

New Project (93)

ವಿವಿಯಿಂದಾಗಿ ಶಿಕ್ಷಣ, ಸಂಶೋದನೆ ಮತ್ತು ಸಂರಕ್ಷಣೆ ಮೂರು ಕಾರ್ಯಗಳನ್ನು ಒಟ್ಟಿಗೆ ನಿರ್ವಹಿಸುತ್ತಿರುವ ಸಂಸ್ಥೆಯಾಗಿ ವಂತಾರಾ ಗುರುತಿಸಿಕೊಳ್ಳಲಿದೆ. ಪದವಿಪೂರ್ವ, ಸ್ನಾತಕೋತ್ತರ, ಫೆಲೋಶಿಪ್ ಮತ್ತು ವಿಶೇಷ ಕೋರ್ಸ್‌ಗಳು ಸೇರಿದಂತೆ ವಿವಿಧ ಪ್ರೋಗ್ರಾಮ್‌ಗಳನ್ನು ವಿಶ್ವವಿದ್ಯಾನಿಲಯ ನೀಡಲಿದೆ.

ಪಶು ವೈದ್ಯಕೀಯ ಮತ್ತು ಸಂರಕ್ಷಣೆಗೆ ಸಂಬಂಧಿತ ವಿಷಯಗಳಾದ ವೈಲ್ಡ್‌ಲೈಫ್‌ ಮೆಡಿಸಿನ್‌ ಅಂಡ್‌ ಸರ್ಜರಿ, ಅನಿಮಲ್‌ ನ್ಯೂಟ್ರಿಷನ್‌, ಬಿಹೇವಿಯರಲ್‌ ಸೈನ್ಸಸ್‌, ಜೆನೆಟಿಕ್ಸ್‌, ಕನ್ಸರ್ವೇಶನ್‌ ಪಾಲಿಸಿ ಸೇರಿ ನಾನಾ ಪ್ರೋಗ್ರಾಂಗಳು ವಂತಾರಾ ವಿಶ್ವವಿದ್ಯಾಲಯ ಮತ್ತು ಅದರೊಟ್ಟಿಗೆ ಅಲೈನ್‌ ಆಗಿರುವ ವಿವಿಧ ಕಾಲೇಜುಗಳಲ್ಲಿ ಆರಂಭವಾಗಲಿವೆ. ವಿಶೇಷವೆಂದರೆ ವಂತಾರಾ ಸಂಸ್ಥೆಯು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನೂ ನೀಡಲು ನಿರ್ಧರಿಸಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!