ವೈಷ್ಟೋದೇವಿ ಯಾತ್ರೆ ಭಾರಿ ಮಳೆಯಿಂದಾಗಿ ಮತ್ತೆ ಸ್ಥಗಿತ
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ, ಯಾತ್ರಿಕರ ಭದ್ರತೆಯ ದೃಷ್ಟಿಯಿಂದ ಯಾತ್ರೆಯನ್ನು ಪುನರಾರಂಭಿಸಿಲ್ಲ ಎಂದು ಮಾತಾ ವೈಷ್ಟೋ ದೇವಿ ಮಂದಿರ ಮಂಡಳಿ ತಿಳಿಸಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಟೋ ದೇವಿಯ ಗುಹಾ ದೇವಾಲಯ ಯಾತ್ರೆಯು ಭಾರಿ ಮಳೆಯ ಕಾರಣದಿಂದ ಮತ್ತೆ ಸ್ಥಗಿತಗೊಂಡಿದೆ. ಹಲವು ಸಾವು-ನೋವುಗಳಿಗೆ ಕಾರಣವಾಗಿದ್ದ ಭೀಕರ ಭೂಕುಸಿತದಿಂದಾಗಿ ಕೆಲವು ದಿನ ನಿಂತಿದ್ದ ಯಾತ್ರೆ ಭಾನುವಾರ ಪುನರಾರಂಭಗೊಳ್ಳಬೇಕಿತ್ತು.
ಆದರೆ ಈ ವಲಯದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಯಾತ್ರೆಯನ್ನು ಪುನಃ ಆರಂಭಿಸಲು ಸಾಧ್ಯವಾಗಿಲ್ಲ ಎಂದು ಮಾತಾ ವೈಷ್ಟೋ ದೇವಿ ಮಂದಿರ ಮಂಡಳಿ ಶನಿವಾರ ಪ್ರಕಟಿಸಿದೆ.
Jai Mata Di!
— Shri Mata Vaishno Devi Shrine Board (@OfficialSMVDSB) September 13, 2025
Due to incessant rain at Bhawan & the track, commencement of Shri Mata Vaishno Devi Yatra scheduled from 14th Sept stands postponed till further order. Devotees are requested to stay updated through official communication channels. @OfficeOfLGJandK @diprjk
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ, ಯಾತ್ರಿಕರ ಭದ್ರತೆಯ ದೃಷ್ಟಿಯಿಂದ ಯಾತ್ರೆಯನ್ನು ಪುನರಾರಂಭಿಸಿಲ್ಲ ಎಂದು ವಿವರಿಸಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಯಾತ್ರೆ ಕುರಿತ ಮಾಹಿತಿಯನ್ನು ಇಂದುಗೊಳಿಸುವುದಾಗಿಯೂ ಮಂಡಳಿ ಹೇಳಿದೆ. ಆಗಸ್ಟ್ 26ರ ಭೂಕುಸಿತದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.