ಇಂಡಿಯನ್ ರೈಲ್ವೇ ಕೇಟರಿಂಗ್ & ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಯ ಸಹಯೋಗದಲ್ಲಿ ಕರ್ನಾಟಕದವರಿಗಾಗಿ ಭಾರತ್ ಗೌರವ್ ಪ್ರವಾಸಿ ರೈಲು ಯೋಜನೆಯಡಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಜುಲೈ 7ರಿಂದ 12ರವರೆಗೆ ಈ ಯಾತ್ರೆಯನ್ನು ಆಯೋಜಿಸಲಾಗಿದ್ದು, ಕನ್ಯಾಕುಮಾರಿಯ ಭಗವತಿ ದೇವಸ್ಥಾನ, ವಿವೇಕಾನಂದ ರಾಕ್ ಸ್ಮಾರಕ, ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನ, ಮಧುರೈನ ಮೀನಾಕ್ಷಿ ದೇವಸ್ಥಾನ ದೇವಾಲಯಗಳಿಗೆ ಎಸಿ ಟೈರ್ 3 ಕೋಚ್ ಗಳಲ್ಲಿ ಯಾತ್ರಿಕರಿಗೆ ಆರಾಮದಾಯಕ ಪ್ರಯಾಣವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಅಡಿಗಾಸ್‌ ಯಾತ್ರಾದಿಂದ ನ್ಯೂಜಿಲೆಂಡ್‌ ಪ್ರವಾಸ

ಯಾತ್ರಿಕರಿಗೆ ಡಬಲ್‌ ಹಾಗೂ ತ್ರಿಬಲ್‌ ಶೇರಿಂಗ್‌ ಆಧಾರದ ಮೇಲೆ ಹವಾನಿಯಂತ್ರಿತವಲ್ಲದ ಕೊಠಡಿಗಳಲ್ಲಿ ವಸತಿ ಸೌಕರ್ಯ, ಊಟೋಪಚಾರ ಮತ್ತು ಪ್ರಯಾಣ ವಿಮೆಯನ್ನು ಒದಗಿಸಲಾಗುವುದು ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಪ್ರತಿ ವ್ಯಕ್ತಿ ಅಂದಾಜು 15,000 ರು. ಭರಿಸಬೇಕಾಗಿದ್ದು, ರಾಜ್ಯ ಸರಕಾರವು ಕರ್ನಾಟಕದಲ್ಲಿ ನೆಲೆಸಿರುವ ಪ್ರಯಾಣಿಕರಿಗಾಗಿ 5,000 ರು. ಸಬ್ಸಿಡಿಯನ್ನು ನೀಡುತ್ತಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಸರ್.‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ಇಲ್ಲಿ ಬೋರ್ಡಿಂಗ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ದಕ್ಷಿಣ ಭಾರತದ ಐತಿಹಾಸಿಕ ದೇವಾಲಯಗಳ ದರ್ಶನಕ್ಕೆ ಈ ಪ್ಯಾಕೇಜ್ ಸೂಕ್ತವಾಗಿದ್ದು, ಹೆಚ್ಚಿನ ಮಾಹಿತಿ www.irctctourism.com ವೆಬ್ ಸೈಟ್ ನಲ್ಲಿ ಲಭ್ಯವಿದೆ.

ವಿವರಗಳಿಗಾಗಿ ಸಂಪರ್ಕಿಸಿ: -

ಬೆಂಗಳೂರು-9003140710/8595931291/1292

ಮೈಸೂರು-8595931294

ಹುಬ್ಬಳ್ಳಿ-8595931293