ಬೆಂಗಳೂರು :ಈಶಾನ್ಯ ಭಾರತದ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ತಮ್ಮ ಅದ್ಭುತ ನೈಸರ್ಗಿಕ ಸೌಂದರ್ಯ, ವನ್ಯಜೀವಿ ಸಂಪತ್ತು ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರುವಾಸಿಯಾಗಿವೆ. ಈ ಎರಡೂ ರಾಜ್ಯಗಳ ಪ್ರವಾಸವು ಪ್ರವಾಸಿಗರಿಗೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುವಂಥ ಅನುಭವವನ್ನು ನೀಡುತ್ತದೆ. ವರ್ಷದಲ್ಲಿ ಸಾಧಾರಣವಾಗಿ ಕೇವಲ 6 ತಿಂಗಳು ಈ ಪ್ರವಾಸಕ್ಕೆ ಸೂಕ್ತ ಕಾಲ. ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ಈ ಪ್ರದೇಶಗಳಿಗೆ ಪ್ರವಾಸದ ಸಿದ್ಧತೆ ಹಾಗೂ ಯೋಜನೆಯನ್ನು ರೂಪಿಸಬಹುದು.

ಇದನ್ನೂ ಓದಿ: ಅಡಿಗಾಸ್‌ ಯಾತ್ರಾದಿಂದ ಸಿಂಗಾಪುರ-ಮಲೇಷ್ಯಾ-ಥಾಯ್ಲೆಂಡ್‌ ಪ್ರವಾಸ

ಅಸ್ಸಾಂ ನ ಗುವಾಹತಿಗೆ ಬೆಂಗಳೂರಿನಿಂದ ನೇರ ವಿಮಾನ ಹಾಗೂ ರೈಲು ಪ್ರಯಾಣ ಸೌಕರ್ಯವಿದೆ. ಗುವಾಹತಿಯಲ್ಲಿ ಸಂದರ್ಶಸಲೇ ಬೇಕಾದ ಬಹಳಷ್ಟು ಪ್ರವಾಸಿ ತಾಣಗಳಲ್ಲಿ ಪ್ರಮುಖವಾದದ್ದು ಶಕ್ತಿಪೀಠ ಕಾಮಾಕ್ಯ ಮಂದಿರ. ನೀಲಾಚಲ ಪರ್ವತದ ಮೇಲೆ ಶಕ್ತಿ ದೇವತೆ, ತಂತ್ರ ರೂಪಿಣಿ ಕಾಮಾಕ್ಯ ದೇವಿ ನೆಲೆಸಿದ್ದಾಳೆ. ಸುಂದರವಾದ ಈ ಶಕ್ತಿಪೀಠ, ಮಾತಾ ಸತಿ ದೇವಿಯ ಯೋನಿ ಭಾಗ ಬಿದ್ದ ಸ್ಥಳವಾಗಿದೆ.

Untitled design (60)

ಉಮಾನಂದ ( peacock Island ): ಬ್ರಹ್ಮಪುತ್ರಾ ನದಿಯ ಮಧ್ಯದಲ್ಲೊಂದು ಸುಂದರವಾದ ಪುಟ್ಟ ದ್ವೀಪ ಉಮಾನಂದ. ಬಹು ಸಂಖ್ಯೆಯ ನವಿಲುಗಳ ಆವಾಸ ಸ್ಥಾನವಾದುದರಿಂದ ಅದನ್ನು peacock island ಎನ್ನುವ ಅನ್ವರ್ಥನಾಮ ಕೂಡ ಈ ದ್ವೀಪಕ್ಕಿದೆ. ಬ್ರಹ್ಮಪುತ್ರ ನದಿಯಲ್ಲಿ ದೋಣಿಯ ಮೂಲಕ ಸಂಚರಿಸಿ ಈ ದ್ವೀಪವನ್ನು ತಲುಪಬೇಕು. ಇಲ್ಲಿಯ ಶಿವನ ಮಂದಿರ ಪುರಾತನವಾಗಿದ್ದು ಶಾಂತವಾಗಿ ಭಕ್ತರನ್ನು ಸೆಳೆಯುತ್ತದೆ. ಹಾಗೆಯೇ ಹನುಮಾನ್ ಮಂದಿರ ಈ ಸ್ಥಳದ ಮಹಿಮೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ದ್ವೀಪಕ್ಕೆ ಬಂದು ಹೋಗುವ ಬೋಟ್ ಪ್ರಯಾಣದಲ್ಲಿ ನಮಗೆ ಬ್ರಹ್ಮಪುತ್ರ ಎಂಬ ನದಿಯ ವಿಸ್ತಾರ, ಹರವು ಹಾಗೂ ಶಕ್ತಿಶಾಲಿ ಅಸ್ಮಿತೆ ಬೆರಗನ್ನು ಮೂಡಿಸುತ್ತದೆ. ನಗರದ ಹೊರವಲಯದ ತಿರುಪತಿ ಬಾಲಾಜಿ ಮಂದಿರ ದಕ್ಷಿಣದ ಸೊಬಗನ್ನು ಮೈಗೂಡಿಸಿಕೊಂಡು ಪೂರ್ವ ದಕ್ಷಿಣದ ಭೇದವಿಲ್ಲದ ಭಾರತೀಯತೆಯನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ.

ಅಸ್ಸಾಂ ರಾಜ್ಯದಲ್ಲಿ ಅನೇಕ ರಾಷ್ಟ್ರೀಯ ಉದ್ಯಾನವನಗಳಿವೆ. ಅವುಗಳಲ್ಲಿ ಒಂದಾದ ಕಾಝಿರಂಗ ರಾಷ್ಟ್ರೀಯ ಉದ್ಯಾನವು ತನ್ನ ವಿಸ್ತಾರ, ಅಲ್ಲಿಯ ಸಸ್ಯ ಸಂಕುಲ, ಜೀವ ಸಂಕುಲ ಹಾಗೇ ಅತೀ ಪ್ರಮುಖವಾಗಿ ಒಂದು ಕೊಂಬಿನ ಖಡ್ಗಮೃಗಕ್ಕೆ ಹೆಸರುವಾಸಿಯಾಗಿದೆ. ಅಸ್ಸಾಂ ರಾಜ್ಯದ ನಗಾಂವ್ ಹಾಗೂ ಗೋಲ್ ಘಾಟ್ ಎಂಬ ಎರಡು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಈ ಉದ್ಯಾನವನದಲ್ಲಿ ನಸುಕಿನ ಜಾವದಲ್ಲಿ ಅನುಭವಿಸುವ ಆನೆ ಸವಾರಿ ( elephant safari ) ಹಾಗೂ ನಂತರ ಹಗಲಿನ / ಸಂಜೆಯ ಜೀಪು ಸಫಾರಿ ( jeep safari ) ಜೀವನದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗುತ್ತದೆ.

ನಗಾoವ್ ನ 126 ಅಡಿ ಎತ್ತರದ ಮಹಾ ಮೃತ್ಯುಂಜಯ ಮಂದಿರ ಈ ಪ್ರವಾಸದ ಮತ್ತೊಂದು ಸುಂದರ ಅನುಭೂತಿ.

ಮೇಘಗಳ ಆಲಯ.. ಮೇಘಾಲಯ ಕೈಬೀಸಿ ಕರೆದಾಗ ಅತ್ತ ಹೋಗದಿದ್ದರೆ ಹೇಗೆ? ಕಾಝಿರಂಗದಿಂದ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಗೇ 260 ಕಿ.ಮೀ ಗಳ 6 ಘಂಟೆಯ ಪ್ರಯಾಣ. ದಾರಿಯಲ್ಲಿ ಸಿಗುವ ಕೃತಕ ಸರೋವರ ಉಮಿಯಾಮ್ ಲೇಕ್ ( ಬರಾ ಪಾನಿ )ಯ ಮಡಿಲಲ್ಲೊಂದು ಸುತ್ತು ಹಾಕಿ ಇಚ್ಛೆಯಿದ್ದಲ್ಲಿ ಬೋಟಿಂಗ್ ಮಾಡಿ ಅಲ್ಲಿಂದ ಮುಂದೆ ಸಿಗುವ ಡಾನ್ ಬಾಸ್ಕೊ ಮ್ಯೂಸಿಯಂ ನತ್ತ ನಮ್ಮ ಗಮನ. ಇದೊಂದು ಅಚ್ಚುಕಟ್ಟಾದ, ವ್ಯವಸ್ಥಿತವಾದ ಮ್ಯೂಸಿಯಂ. ಏಳು ಅಂತಸ್ತಿನ ಈ ಮ್ಯೂಸಿಯಂನ ಪ್ರತಿಯೊಂದು ಅಂತಸ್ತು ಈಶಾನ್ಯ ರಾಜ್ಯದ 7 ರಾಜ್ಯಗಳನ್ನು ಪ್ರತಿನಿಧಿಸುತ್ತವೆ. ಆಯಾಯ ರಾಜ್ಯಗಳ ಜನ ಜೀವನ, ಉದ್ಯೋಗ, ಅವರ ಜಾನಪದ ಕಲೆಗಳು, ಉಪಯೋಗಿಸುವ ಆಯುಧಗಳು, ಬಟ್ಟೆ ಬರೆ ಇತ್ಯಾದಿಗಳನ್ನು ಪರಿಚಯಿಸುತ್ತದೆ.

Untitled design (59)

3 ರಾತ್ರಿಗಳ ವಾಸ್ತವ್ಯ ಈ ಸುಂದರವಾದ ಗಿರಿ ಧಾಮ ಶಿಲ್ಲಾoಗ್ ನಲ್ಲಿ ಮಾವ್ಲಿನಾಂಗ್, ಏಷ್ಯಾದ ಸ್ವಚ್ಛ ಹಳ್ಳಿ ( cleanest village of Asia )ಪ್ರಕೃತಿಯ ವಿಶಿಷ್ಟ ಲಿವಿಂಗ್ ರೂಟ್ ಬ್ರಿಡ್ಜ್, ದಾವ್ಕಿ ನದಿಯ ಸ್ಪಟಿಕ ಸದೃಶ ಜಲ, ಉಮಾನ್ಗಾಟ್ ಸೇತುವೆಯ ವೀಕ್ಷಣೆ ಎಲ್ಲವೂ ಅನುಭವಿಸಿಯೇ ಹೇಳಬೇಕು. ಚಿರಾಪುಂಜಿಯ ಮಾವ್ಸಮಿ ಗುಹೆಗಳು, ಕಣಿವೆ, ಅಲ್ಲಿಂದ ಕಾಣುವ ಬಾಂಗ್ಲಾದ ಬಯಲು ಪ್ರದೇಶ, ವಕ್ ಬಾ, ಸೆವೆನ್ ಸಿಸ್ಟರ್, ನೋಕಲಿಕಾಯ್ ಜಲಪಾತಗಳು, ಅದೃಷ್ಟವಿದ್ದರೆ ಕೆಲವೊಮ್ಮೆ ಅಚಾನಕ್ಕಾಗಿ ಹನಿಯುವ ತುಂತುರು ಮಳೆ ಮೇಘಾಲಯವನ್ನು ನಿಮ್ಮ ಮೈ ಮನಸುಗಳಲ್ಲಿ ತುಂಬಿಕೊಳ್ಳುವoತೆ ಮಾಡುತ್ತದೆ.

ಅಡಿಗಾಸ್ ಯಾತ್ರಾದ ಬಹು ಬೇಡಿಕೆಯ ಈ ಪ್ರವಾಸದಲ್ಲಿ ತಾರಾ ಹೊಟೇೆಲ್ ವಾಸ್ತವ್ಯ, ಲಕ್ಷುರಿ ವಾಹನಗಳಲ್ಲಿ ಪ್ರಯಾಣ, ಊಟೋಪಹಾರ, ಕಾಝಿರಂಗದಲ್ಲಿನ ಸಫಾರಿಗಳನ್ನು ಒಳಗೊಂಡಿರುತ್ತದೆ.

ಪ್ರವಾಸ ಹೊರಡುವ ದಿನಾಂಕ ಮತ್ತು ಹೆಚ್ಚಿನ ಮಾಹಿತಿಗೆ ಅಡಿಗಾಸ್ ವೆಬ್ ಸೈಟ್ www.adigasyatra.com, ಅಥವಾ ದೂರವಾಣಿ 080-26616678/ 7022259008/ 9449478944 ಅನ್ನು ಸಂಪರ್ಕಿಸಬಹುದು.