ವಡೋದರಾದಿಂದ ಮುಂದ್ರಾಗೆ ಏರ್ ಟ್ಯಾಕ್ಸಿ ಸೇವೆ ಆರಂಭ
ಗುಜರಾತ್‌ನ ವಡೋದರಾ ಮತ್ತು ಮುಂದ್ರಾ ನಡುವೆ ಹೊಸ ಏರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದ್ದು, ದೂರದ ರಸ್ತೆ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಲಭ್ಯವಾಗಿದೆ.
ಗುಜರಾತ್‌ನ ವಡೋದರಾ ಮತ್ತು ಮುಂದ್ರಾ ನಡುವೆ ಹೊಸ ಏರ್ ಟ್ಯಾಕ್ಸಿ ಸೇವೆ ಆರಂಭಗೊಂಡಿದ್ದು, ದೂರದ ರಸ್ತೆ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಲಭ್ಯವಾಗಿದೆ. ಫ್ಲೈ ಏರ್ ಟ್ಯಾಕ್ಸಿ ನಿರ್ವಹಿಸುತ್ತಿರುವ ಈ ಸೇವೆ ಆಗಸ್ಟ್ 28ರಿಂದ ಕಾರ್ಯಾರಂಭಿಸಿದೆ. ಮುಂದ್ರಾ ಬಂದರು ಹಾಗೂ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಉದ್ಯಮಿಗಳು ಮತ್ತು ಉದ್ಯೋಗಿಗಳಿಗೆ ಈ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ.
ವಡೋದರಾದಿಂದ ಮುಂದ್ರಾಗೆ ಪ್ರತಿದಿನ ಬೆಳಗ್ಗೆ 6.30, 6.55 ಮತ್ತು 7.20ಕ್ಕೆ ಮೂರು ವಿಮಾನಗಳು ಹೊರಡಲಿವೆ. ಭಾನುವಾರ ಹೆಚ್ಚುವರಿಯಾಗಿ ಬೆಳಗ್ಗೆ 7.45ಕ್ಕೆ ಒಂದು ಸೇವೆ ಇರಲಿದೆ. ಮುಂದ್ರಾದಿಂದ ವಡೋದರಾಗೆ ಹಿಂದಿರುಗುವ ವಿಮಾನಗಳ ಸಮಯ ವಾರದ ದಿನಗಳ ಪ್ರಕಾರ ಬದಲಾಗುತ್ತದೆ.
ಟಿಕೆಟ್ ದರ ಸುಮಾರು 499 ರು.ರಿಂದ 3,400 ರು. ರವರೆಗೆ ಇರಲಿದ್ದು, ಬೇಡಿಕೆ, ಸೀಟು ಲಭ್ಯತೆ ಮತ್ತು ಡೈನಾಮಿಕ್ ಪ್ರೈಸಿಂಗ್ ಆಧರಿಸಿ ದರ ಬದಲಾಗಬಹುದು. ಸೀಮಿತ ಸೀಟುಗಳಿರುವುದರಿಂದ ಮುಂಚಿತವಾಗಿ ಬುಕ್ ಮಾಡುವುದು ಸೂಕ್ತ.