ನವದೆಹಲಿ: ಹೆನ್ಸಿ ಪಾಸ್‌ಪೋರ್ಟ್ ಸೂಚ್ಯಂಕ 2025ರಲ್ಲಿ ಭಾರತದ ಪಾಸ್‌ಪೋರ್ಟ್ 8 ಸ್ಥಾನ ಏರಿಕೆ ಕಂಡಿದ್ದು, 77ನೇ ಸ್ಥಾನ ಪಡೆದಿದೆ. ವಿವಿಧ ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು ಎಂಬುದನ್ನು ಆಧರಿಸಿ ಸೂಚ್ಯಂಕದ ಪಟ್ಟಿ ಸಿದ್ಧಪಡಿಸಲಾಗಿದೆ.

passport

ಇದರಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಮಲೇಷ್ಯಾ, ಇಂಡೋನೇಷ್ಯಾ, ಮಾಲೀಮ್ಸ್, ಥೈಲ್ಯಾಂಡ್ ಸೇರಿದಂತೆ 59 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯಬಹುದು. ಶ್ರೀಲಂಕಾ, ಮಕಾವು ಮತ್ತು ಮ್ಯಾನ್ಮಾರ್‌ನಂತಹ ಹಲವು ದೇಶಗಳು ಆಗಮನದ ನಂತರ ವೀಸಾ (ವೀಸಾ ಅನ್ ಅರೈವಲ್) ನೀಡುತ್ತವೆ.

ಈ ಪಟ್ಟಿಯಲ್ಲಿ ಸಿಂಗಾಪುರ ಪಾಸ್‌ಪೋರ್ಟ್ ಮೊದಲ ಸ್ಥಾನದಲ್ಲಿದ್ದು, ಈ ದೇಶದ ಪಾಸ್‌ಪೋರ್ಟ್ ಹೊಂದಿರುವವರಿಗೆ 193 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ದೊರೆಯುತ್ತದೆ. 190 ದೇಶಗಳಿಗೆ ವೀಸಾ ಮುಕ್ತ ಪ್ರವೇಶದೊಂದಿಗೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.