ಋಷಿಕೇಶದಲ್ಲಿ ಶೀಘ್ರದಲ್ಲೇ ಬರಲಿದೆ ಬಜರಂಗ ಸೇತು!
ಹಳೆಯ ಲಕ್ಷ್ಮಣ ಜೂಲಾಗೆ ವಿದಾಯ ಹೇಳಿ, ಅದ್ಭುತವಾದ ಹೊಸ ಹೆಗ್ಗುರುತನ್ನು ಸ್ವಾಗತಿಸಲು ಗಂಗಾ ನದಿಯ ಮೇಲೆ ಗಾಜಿನ ಪಾದಚಾರಿ ಮಾರ್ಗಗಳು ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿರುವ ಬಜರಂಗ ಸೇತು ನಿರ್ಮಾಣ ಕಾರ್ಯವನ್ನೂ ಪ್ರಾರಂಭಿಸಿದ್ದು, ಡಿಸೆಂಬರ್ ವೇಳೆಗೆ ಪಾದಾಚಾರಿಗಳಿಗೆ ಮುಕ್ತವಾಗಲಿದೆ.
ಉತ್ತರಾಖಂಡ ಋಷಿಕೇಶದಲ್ಲಿರುವ ರಾಮ್ ಜೂಲಾ ಹಾಗೂ ಜಾನಕಿ ಸೇತುವಿನಂತೆಯೇ, 90 ವರ್ಷ ಹಳೆಯದಾದ ಲಕ್ಷ್ಮಣ ಜೂಲಾ ಪ್ರಯಾಣಿಕರಿಗೆ ಸುರಕ್ಷಿತವಾಗಿಲ್ಲ ಎಂಬ ಕಾರಣಕ್ಕೆ 2019ರಲ್ಲಿಯೇ ಮುಚ್ಚಲಾಗಿತ್ತು. ಹಳೆಯ ಲಕ್ಷ್ಮಣ ಜೂಲಾಗೆ ವಿದಾಯ ಹೇಳಿ, ಅದ್ಭುತವಾದ ಹೊಸ ಹೆಗ್ಗುರುತನ್ನು ಸ್ವಾಗತಿಸಲು ಗಂಗಾ ನದಿಯ ಮೇಲೆ ಗಾಜಿನ ಪಾದಚಾರಿ ಮಾರ್ಗಗಳು ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿರುವ ಬಜರಂಗ ಸೇತು ನಿರ್ಮಾಣ ಕಾರ್ಯವನ್ನೂ ಪ್ರಾರಂಭಿಸಲಾಗಿತ್ತು.
60 ಕೋಟಿ ರು. ವೆಚ್ಚದಲ್ಲಿ ನಿರ್ಮಾಣದ ಹಂತದಲ್ಲಿದ್ದ ಬಜರಂಗ ಸೇತು, 132 ಮೀಟರ್ ಉದ್ದ ಹಾಗೂ 8 ಮೀಟರ್ ಅಗಲವಿದೆ. ದ್ವಿಚಕ್ರ ವಾಹನಗಳಿಗಾಗಿ ಉಕ್ಕಿನ ಡೆಕ್ ಸಹ ನಿರ್ಮಾಣದ ಹಂತದಲ್ಲಿದ್ದು, ಪಾದಚಾರಿಗಳಿಗೆ ಎರಡೂ ಬದಿಗಳಲ್ಲಿ ಗಾಜಿನ ನಡಿಗೆ ಮಾರ್ಗಗಳು ಸಿದ್ಧವಾಗುತ್ತಿವೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಡಿಸೆಂಬರ್ 2025 ರ ವೇಳೆಗೆ ಬಜರಂಗ ಸೇತು ಋಷಿಕೇಶ ಕಾಮಗಾರಿ ಪೂರ್ಣಗೊಂಡು, ಪಾದಾಚಾರಿ ಹಾಗೂ ವಾಹನನ ಚಾಲಕರಿಗೆ ಮುಕ್ತವಾಗಲಿದೆ ಎಂದು ಉತ್ತರಾಖಂಡದ ಪಿಡಬ್ಲ್ಯೂಡಿ ಮತ್ತು ಸೇತು ಇಲಾಖೆ ಮಾಹಿತಿ ನೀಡಿದೆ.