ಬೆಂಗಳೂರು-ಹಂಪಿ ವಿಮಾನ ಸೇವೆ
ಐತಿಹಾಸಿಕ ಪಟ್ಟಣಕ್ಕೆ ಹತ್ತಿರದ ವಿಮಾನ ನಿಲ್ದಾಣವಾದ ವಿದ್ಯಾನಗರ ಏರ್‌ಪೋರ್ಟ್ ಮೂಲಕ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಬೆಂಗಳೂರು ಮತ್ತು ಹಂಪಿಯನ್ನು ಸಂಪರ್ಕಿಸುವ ಹೊಸ ವಿಮಾನವನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಬೆಂಗಳೂರು ಮತ್ತು ಹಂಪಿಯನ್ನು ಸಂಪರ್ಕಿಸುವ ಹೊಸ ವಿಮಾನವನ್ನು ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿದೆ.
ಐತಿಹಾಸಿಕ ಪಟ್ಟಣಕ್ಕೆ ಹತ್ತಿರದ ವಿಮಾನ ನಿಲ್ದಾಣವಾದ ವಿದ್ಯಾನಗರ ಏರ್‌ಪೋರ್ಟ್ ಮೂಲಕ ವಿಮಾನಗಳು ಕಾರ್ಯನಿರ್ವಹಿಸಲಿವೆ. ಕಳೆದ ಒಂದು ತಿಂಗಳಿನಿಂದ ಜೆಎಸ್‌ಡಬ್ಲ್ಯೂ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿರುವುದರಿಂದ ಪ್ರಯಾಣಿಕರು ಮತ್ತು ಸ್ಥಳೀಯರಿಗೆ ಈ ಘೋಷಣೆ ನಿರಾಳವಾಗಿದೆ. ಈ ಹೊಸ ವಿಮಾನ ಯಾನ ಸೇವೆಯಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಂಪಿಗೆ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದ್ದು, ನವೆಂಬರ್ 1 ರಂದು ವಿಮಾಣ ಯಾನ ಪ್ರಾರಂಭವಾಗಲಿದೆ. ಈ ಹಿಂದೆ, ಅಲೈಯನ್ಸ್ ಏರ್ ಹಂಪಿಯಿಂದ ಬೆಂಗಳೂರಿಗೆ ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.