Wednesday, February 4, 2026
Wednesday, February 4, 2026

ಮೆಡಿಕಲ್‌ ಟೂರಿಸಂಗೆ ಕೇಂದ್ರದ ಟಾನಿಕ್‌

ವಿದೇಶಿ ಪ್ರವಾಸಿಗರು ಭಾರತೀಯ ಚಿಕಿತ್ಸಾ ಸೌಲಭ್ಯವನ್ನು ತಮ್ಮದಾಗಿಸಿಕೊಳ್ಳಲು ಭಾರತಕ್ಕೆ ಬರುತ್ತಲೇ ಇದ್ದಾರೆ. ಎಷ್ಟೋ ಜನ ಯೋಗ ಮತ್ತು ಆಯುರ್ವೇದ ಶೈಲಿಯ ಚಿಕಿತ್ಸೆಯಿಂದ ಒಳ್ಳೆಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದನ್ನು ಕೇಂದ್ರ ಸರಕಾರ ಕಟ್ಟುನಿಟ್ಟಾಗಿ ಜಾರಿ ಮಾಡಿದರೆ, ದೇಶದ ಪ್ರಾಚೀನ ಪದ್ಧತಿಯಿಂದ ವಿಶ್ವದ ಅನೇಕರಿಗೆ ಸ್ವಾಸ್ಥ್ಯ ನೀಡುವುದರ ಜತೆಗೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರವಾಸಿಗರನ್ನೂ ಸೆಳೆಯಬಹುದು ಎಂದು ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ.

ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Finance minister nirmala sitharaman) ಮಂಡಿಸಿದ ಬಜೆಟ್‌ನಲ್ಲಿ 5 ಪ್ರಾದೇಶಿಕ ಮೆಡಿಕಲ್‌ ಟೂರಿಸಂ ಹಬ್‌ಗಳನ್ನು (medical tourism hub) ಘೋಷಣೆ ಮಾಡಿದ್ದಾರೆ. ಇದರಿಂದ ನ್ಯಾಚುರೋಪತಿ, ಆಯುರ್ವೇದ, ಯುನಾನಿ, ಯೋಗ ಹೀಗೆ ಭಾರತೀಯ ಶೈಲಿಯ ಚಿಕಿತ್ಸಾ ಮತ್ತು ಆರೋಗ್ಯ ಕೇಂದ್ರಗಳಿಗೆ ಮತ್ತಷ್ಟು ಬಲಸಿಗಲಿದೆ.

ಇದನ್ನೂ ಒದಿ: ಹಿಮಾಲಯ ಪ್ರದೇಶಗಳಿಗೆ ಮೌಂಟೇನ್‌ ರೈಲು

ಬಜೆಟ್‌ ನ್ನು ಪ್ರಸ್ತುತ ಪಡಿಸುತ್ತಾ ‘ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ಕೇಂದ್ರವಾಗಿ ಉತ್ತೇಜಿಸಲು, ಖಾಸಗಿ ವಲಯದ ಸಹಭಾಗಿತ್ವದಲ್ಲಿ ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡುವ ಯೋಜನೆಯನ್ನು ಪ್ರಾರಂಭಿಸಲು ನಾನು ಪ್ರಸ್ತಾಪಿಸುತ್ತೇನೆ. ಈ ಕೇಂದ್ರಗಳು ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ರಕ್ಷಣಾ ಸಂಕೀರ್ಣಗಳಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳು ಆಯುಷ್ ಕೇಂದ್ರಗಳು, ವೈದ್ಯಕೀಯ ಮೌಲ್ಯ ಪ್ರವಾಸೋದ್ಯಮ ಸೌಲಭ್ಯ ಕೇಂದ್ರಗಳು ಮತ್ತು ರೋಗನಿರ್ಣಯ, ನಂತರದ ಆರೈಕೆ ಮತ್ತು ಪುನರ್ವಸತಿಗಾಗಿ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ಈ ಕೇಂದ್ರಗಳು ವೈದ್ಯರು ಮತ್ತು AHP ಗಳು ಸೇರಿದಂತೆ ಆರೋಗ್ಯ ವೃತ್ತಿಪರರಿಗೆ ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆʼ ಎಂದು ಹೇಳಿದ್ದಾರೆ.

ಈಗಾಗಲೇ ಹಲವಾರು ವಿದೇಶಿ ಪ್ರವಾಸಿಗರು ಭಾರತೀಯ ಚಿಕಿತ್ಸಾ ಸೌಲಭ್ಯವನ್ನು (indian medicines) ತಮ್ಮದಾಗಿಸಿಕೊಳ್ಳಲು ಭಾರತಕ್ಕೆ ಬರುತ್ತಲೇ ಇದ್ದಾರೆ. ಎಷ್ಟೋ ಜನ ಯೋಗ ಮತ್ತು ಆಯುರ್ವೇದ ಶೈಲಿಯ ಚಿಕಿತ್ಸೆಯಿಂದ ಒಳ್ಳೆಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದನ್ನು ಕೇಂದ್ರ ಸರಕಾರ ಕಟ್ಟುನಿಟ್ಟಾಗಿ ಜಾರಿ ಮಾಡಿದರೆ, ದೇಶದ ಪ್ರಾಚೀನ ಪದ್ಧತಿಯಿಂದ ವಿಶ್ವದ ಅನೇಕರಿಗೆ ಸ್ವಾಸ್ಥ್ಯ ನೀಡುವುದರ ಜತೆಗೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರವಾಸಿಗರನ್ನೂ ಸೆಳೆಯಬಹುದು ಎಂದು ತಜ್ಞರು ಪ್ರತಿಕ್ರಿಯೆ ನೀಡಿದ್ದಾರೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!