ಪ್ರವಾಸಿಗರಿಗೆ ಗುಣಮಟ್ಟದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ, ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಕೊಯಮತ್ತೂರಿನಲ್ಲಿ ʼಡೆಸ್ಟಿನೇಷನ್ ಗೈಡ್‌ʼಗಳನ್ನು ನೇಮಕ ಮಾಡಲು ನಿರ್ಧರಿಸಿದೆ. ಈ ಕುರಿತು ಅಧಿಕೃತ ಕ್ರಮಗಳು ಆರಂಭವಾಗಿವೆ ಎಂದು ಇಲಾಖೆ ತಿಳಿಸಿದೆ.

ಕೊಯಮತ್ತೂರು ನಗರ ಮತ್ತು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಾರದರ್ಶಕ ಹಾಗೂ ತರಬೇತಿ ಪಡೆದ ಮಾರ್ಗದರ್ಶಕರ ಅವಶ್ಯಕತೆ ಹೆಚ್ಚಾಗಿದೆ. ಇದನ್ನು ಗಮನಿಸಿ, ಪ್ರವಾಸೋದ್ಯಮ ಇಲಾಖೆ ಪ್ರಮಾಣಿತ ಗೈಡ್‌ಗಳನ್ನು ನೇಮಿಸಿ ಅವರಿಗೆ ವಿಶೇಷ ತರಬೇತಿ ನೀಡಲು ಯೋಜನೆ ರೂಪಿಸಿದೆ. ಗೈಡ್‌ಗಳಿಗೆ ಸ್ಥಳೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಮಾಹಿತಿ ನೀಡುವ ತರಬೇತಿ ನೀಡಲಾಗುತ್ತದೆ.

Destination guides


ಸರಕಾರದ ಪ್ರಕಾರ, ಮಾನ್ಯತೆ ಪಡೆದ ಗೈಡ್‌ಗಳ ಮೂಲಕ ಪ್ರವಾಸಿಗರು ಅಧಿಕೃತ ಮಾಹಿತಿಯನ್ನು ಪಡೆಯಬಹುದು. ಜತೆಗೆ, ಸ್ಥಳೀಯ ಪ್ರವಾಸೋದ್ಯಮ, ಹೊಟೇಲ್‌ಗಳು, ಸಾರಿಗೆ, ಕೈಗಾರಿಕೆ ಮತ್ತು ಹೋಮ್‌ಸ್ಟೇ ಕ್ಷೇತ್ರಗಳು ಪರೋಕ್ಷವಾಗಿ ಲಾಭ ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದುವರೆಗೂ ಡೆಸ್ಟಿನೇಶನ್‌ ಗೈಡ್‌ಗಳು ಮಧುರೈ, ಮಹಾಬಲಿಪುರಂ, ತಂಜಾವೂರು ಮತ್ತು ಕನ್ಯಾಕುಮಾರಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಈ ಸೇವೆ ಕೊಯಮತ್ತೂರಿಗೂ ವಿಸ್ತರಿಸುವುದರಿಂದ ತಮಿಳುನಾಡು ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಒದಗಲಿದೆ.