ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ: ಆದಾಯ ಮತ್ತು ಪ್ರವಾಸೋದ್ಯಮದಲ್ಲಿ ಗಣನೀಯ ಬೆಳವಣಿಗೆ
2025–26 ಹಣಕಾಸು ವರ್ಷದಲ್ಲಿ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಸುಮಾರು ₹24.6 ಕೋಟಿ ಆದಾಯ ಗಳಿಸಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ₹21.2 ಕೋಟಿಯೊಂದಿಗೆ ಹೋಲಿಸಿದರೆ ಸ್ಪಷ್ಟ ಏರಿಕೆ ಕಂಡುಬಂದಿದೆ. ಅದೇ ಅವಧಿಯಲ್ಲಿ ರೈಲ್ವೆ ಸೇವೆಗಳನ್ನು ಬಳಸಿದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಳಗೊಂಡಿದ್ದು, 2024–25ರಲ್ಲಿ 1.74 ಲಕ್ಷವಾಗಿದ್ದ ಸಂಖ್ಯೆ 2025–26ರಲ್ಲಿ 2.08 ಲಕ್ಷಕ್ಕೆ ಏರಿಕೆಯಾಗಿದೆ.
ಯುನೆಸ್ಕೋ ವರ್ಲ್ಡ್ ಹೇರಿಟೇಜ್ ಸ್ಥಾನ ಪಡೆದಿರುವ ಐತಿಹಾಸಿಕ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ (DHR) ತನ್ನ ಆದಾಯ ಹೆಚ್ಚಿಸಿಕೊಂಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
2025–26 ಹಣಕಾಸು ವರ್ಷದಲ್ಲಿ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಸುಮಾರು ₹24.6 ಕೋಟಿ ರು. ಆದಾಯ ಗಳಿಸಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ₹21.2 ಕೋಟಿಯೊಂದಿಗೆ ಹೋಲಿಸಿದರೆ ಸ್ಪಷ್ಟ ಏರಿಕೆ ಕಂಡುಬಂದಿದೆ. ಅದೇ ಅವಧಿಯಲ್ಲಿ ರೈಲ್ವೆ ಸೇವೆಗಳನ್ನು ಬಳಸಿದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಳಗೊಂಡಿದ್ದು, 2024–25ರಲ್ಲಿ 1.74 ಲಕ್ಷವಾಗಿದ್ದ ಸಂಖ್ಯೆ 2025–26ರಲ್ಲಿ 2.08 ಲಕ್ಷಕ್ಕೆ ಏರಿಕೆಯಾಗಿದೆ.

ಅಧಿಕಾರಿಗಳ ಪ್ರಕಾರ, ಹೊಸ ಪ್ರವಾಸಿ ಆಕರ್ಷಣೆಗಳು, ವಿಶೇಷ “ಜಾಯ್ ರೈಡ್” ಸೇವೆಗಳು, ಪಾರಂಪರಿಕ ರೈಲು ಕೋಚ್‌ಗಳ ಪುನರುಜ್ಜೀವನ ಹಾಗೂ ಸುಧಾರಿತ ಪ್ರವಾಸಿ ಅನುಭವಗಳು ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ. ಡಾರ್ಜಿಲಿಂಗ್ ಮತ್ತು ಘೂಮ್ ನಡುವಿನ ಪ್ರಸಿದ್ಧ ನ್ಯಾರೋ ಗೇಜ್ ಮಾರ್ಗದ ಜತೆಗೆ, ಸಿಲಿಗುಡಿ–ಟಿಂಧಾರಿಯಾ ವಿಭಾಗದಲ್ಲೂ ಪ್ರವಾಸಿ ಸೇವೆಗಳು ಜನಪ್ರಿಯವಾಗಿವೆ.
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯು ಪ್ರವಾಸೋದ್ಯಮವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೆಚ್ಚುವರಿ ಹೇರಿಟೇಜ್ ಕೋಚ್‌ಗಳ ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಪ್ರವಾಸಿಗರಿಗೆ ಐತಿಹಾಸಿಕ ಮತ್ತು ವಿಶಿಷ್ಟ ಪ್ರಯಾಣ ಅನುಭವ ಒದಗಿಸಲು ಯೋಜನೆ ರೂಪಿಸಲಾಗಿದೆ.
ಈ ಆದಾಯ ಮತ್ತು ಪ್ರವಾಸಿಗರ ಸಂಖ್ಯೆಯ ಏರಿಕೆಯು ಸ್ಥಳೀಯ ಆರ್ಥಿಕತೆಗೆ ಸಹಕಾರಿ ಆಗಿದ್ದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.