Thursday, August 27, 2026
Thursday, August 27, 2026

ಡಾರ್ಜಿಲಿಂಗ್‌ ಹಿಮಾಲಯನ್ ರೈಲ್ವೇಯ ವಿಶೇಷ ಜಾಯ್‌ರೈಡ್

ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಡಾರ್ಜಿಲಿಂಗ್‌ ಹಿಮಾಲಯನ್ ರೈಲ್ವೇ (DHR), ದುರ್ಗಾಪೂಜೆ ಹಬ್ಬದ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್‌ 1ರಿಂದ ವಿಶೇಷ ಜಾಯ್‌ರೈಡ್ ಸೇವೆಗಳನ್ನು ಆರಂಭಿಸಲಿದೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಡಾರ್ಜಿಲಿಂಗ್‌ ಹಿಮಾಲಯನ್ ರೈಲ್ವೇ (DHR), ದುರ್ಗಾಪೂಜೆ ಹಬ್ಬದ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್‌ 1ರಿಂದ ವಿಶೇಷ ಜಾಯ್‌ರೈಡ್ ಸೇವೆಗಳನ್ನು ಆರಂಭಿಸಲಿದೆ. ಐತಿಹಾಸಿಕ ಟಾಯ್‌ ಟ್ರೈನ್‌ನಲ್ಲಿ ಸಂಚರಿಸುತ್ತಾ ಡಾರ್ಜಿಲಿಂಗ್‌ ಬೆಟ್ಟಗಳ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಉದ್ದೇಶ.

Untitled design - 2026-08-27T110836.309

ಡಾರ್ಜಿಲಿಂಗ್‌–ಘೂಮ್ ಮಾರ್ಗದಲ್ಲಿ ನಾಲ್ಕು ಏಕಮುಖ ಜಾಯ್‌ರೈಡ್‌ಗಳು ಸಂಚರಿಸಲಿವೆ. ಡೀಸೆಲ್‌ ಎಂಜಿನ್‌ ರೈಲುಗಳು ಡಾರ್ಜಿಲಿಂಗ್‌ನಿಂದ ಬೆಳಗ್ಗೆ 9.20 ಮತ್ತು 11.25ಕ್ಕೆ ಹೊರಡಲಿದ್ದು, ಘೂಮ್‌ನಿಂದ ಬೆಳಗ್ಗೆ 10.25 ಮತ್ತು ಮಧ್ಯಾಹ್ನ 12.30ಕ್ಕೆ ಹೊರಡಲಿವೆ. ಏಕಮುಖ ಪ್ರಯಾಣದ ಪ್ರಸ್ತಾವಿತ ದರ 800 ರು.

ಇದರ ಜತೆಗೆ ಕುರಸಿಯಾಂಗ್‌–ಮಹಾನದಿ ನಡುವೆ ಎರಡು ಸುತ್ತಿನ ವಿಶೇಷ ಜಾಯ್‌ರೈಡ್‌ಗಳು ಇರಲಿವೆ. ‘ರೆಡ್ ಪಾಂಡಾ’ ಹೆಸರಿನ ಸ್ಟೀಮ್‌ ರೈಲಿನ ದರ ₹1,530. ಇದು ಕುರಸಿಯಾಂಗ್‌ನಿಂದ ಬೆಳಗ್ಗೆ 9ಕ್ಕೆ ಹೊರಟು 10ಕ್ಕೆ ಮಹಾನದಿ ತಲುಪಲಿದೆ. ‘ಮುಕ್ತಧಾರಾ’ ಡೀಸೆಲ್‌ ರೈಲು ಮಧ್ಯಾಹ್ನ 3.15ಕ್ಕೆ ಹೊರಟು 4ಕ್ಕೆ ಮರಳಲಿದೆ. ಇದರ ದರ 1,030 ರು.

‘ಮುಕ್ತಧಾರಾ’ ಹೆಸರನ್ನು ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವಾರ್ಥವಾಗಿ ಇಡಲಾಗಿದೆ. ಸೆಪ್ಟೆಂಬರ್‌ ಅಂತ್ಯದಲ್ಲಿ ಮಹಾನದಿ ರೈಲು ನಿಲ್ದಾಣದಲ್ಲಿ ಇದರ ವಿಶೇಷ ಸಂಚಾರವೂ ನಡೆಯಲಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!