ವಿದ್ಯುತ್ ಚಾಲಿತ ವೈಮಾನಿಕ ಟ್ಯಾಕ್ಸಿಯ ಪರೀಕ್ಷಾ ಹಾರಾಟ ನಡೆಸಿ ಯಶಸ್ವಿಗೊಂಡಿರುವ ದುಬೈ, ಭವಿಷ್ಯದಲ್ಲಿ ನಗರದ ಸಾರಿಗೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಸಿದ್ಧತೆ ನಡೆಸಿದೆ. ದುಬೈನ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (RTA) ಸಹಭಾಗಿತ್ವದಲ್ಲಿ ಜಾಬಿ ಏವಿಯೇಷನ್ ​​ಅಭಿವೃದ್ಧಿಪಡಿಸಿದ, eVTOL (electric vertical take-off and landing) ವಿಮಾನವು ಗಂಟೆಗೆ 320 ಕಿಮೀ ವೇಗದಲ್ಲಿ160 ಕಿಮೀ ವ್ಯಾಪ್ತಿಯಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.

ವಿದ್ಯುತ್ ಚಾಲಿತ ವೈಮಾನಿಕ ಟ್ಯಾಕ್ಸಿಯ ಪರೀಕ್ಷಾ ಹಾರಾಟವನ್ನು ಮರುಭೂಮಿಯಲ್ಲಿ ನಡೆಸಲಾಗಿದ್ದು, ಇದು ನಗರ ವಾಹನ ದಟ್ಟಣೆಗೆ ಪರಿಹಾರ ಕಾಣುವ ಭರವಸೆ ನೀಡಿದೆ. ಈ ವೈಮಾನಿಕ ಟ್ಯಾಕ್ಸಿಗಳು ಆರಂಭದಲ್ಲಿ ಜನದಟ್ಟಣೆಯಿರುವ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪರಿಸರಗಳಲ್ಲಿ ಕಾರ್ಯಾರಂಭಗೊಳ್ಳಲಿದ್ದು, ಪ್ರತ್ಯೇಕವಾಗಿ ನಗರದೊಳಗೆ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ 45 ನಿಮಿಷಗಳ ಕಾರು ಪ್ರಯಾಣವನ್ನು ಕೇವಲ 12 ನಿಮಿಷಗಳಿಗೆ ಇದು ಇಳಿಸಬಹುದು. ಈ ವಿಮಾನ ಪ್ರಯಾಣ ಕೈಗೊಳ್ಳಲು 2026 ರವರೆಗೂ ಕಾಯಲೇಬೇಕು.