Thursday, July 23, 2026
Thursday, July 23, 2026

ವಿದೇಶಿ ಪ್ರವಾಸಿಗರ ಆಗಮನ: 10 ವರ್ಷಗಳಲ್ಲಿ 57% ಏರಿಕೆ

2024ರಲ್ಲಿ ಭಾರತಕ್ಕೆ 2.06 ಕೋಟಿ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಭಾರಿ ಏರಿಕೆಯಾಗಿದೆ

ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನ (International Tourist Arrivals–ITA) ಕಳೆದ ಒಂದು ದಶಕದಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. 2014ರಲ್ಲಿ 1.31 ಕೋಟಿ ಇದ್ದ ಪ್ರವಾಸಿಗರ ಸಂಖ್ಯೆ 2024ರಲ್ಲಿ 2.06 ಕೋಟಿಗೆ ಏರಿಕೆಯಾಗಿದ್ದು, ಶೇ.56.93ರಷ್ಟು ಬೆಳವಣಿಗೆ ದಾಖಲಾಗಿದೆ. ಈ ಮಾಹಿತಿಯನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶೀಯ ಪ್ರವಾಸವೂ ಇದೇ ಅವಧಿಯಲ್ಲಿ ವೇಗವಾಗಿ ಬೆಳೆಯಿತು. 2014ರಲ್ಲಿ 128.28 ಕೋಟಿ ಇದ್ದ ದೇಶೀಯ ಪ್ರವಾಸಿಗರ ಭೇಟಿಗಳು 2024ರಲ್ಲಿ 294.53 ಕೋಟಿಗೆ ತಲುಪಿದ್ದು, ಶೇ.129.60ರಷ್ಟು ಏರಿಕೆಯಾಗಿದೆ. ವಿಶ್ವಸಂಸ್ಥೆಯ World Tourism Barometer 2026 ವರದಿ ಪ್ರಕಾರ, ಜಾಗತಿಕ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದಲ್ಲಿ ಭಾರತದ ಪಾಲು 2014ರ ಶೇ.1.15ರಿಂದ 2024ರಲ್ಲಿ ಶೇ.1.41ಕ್ಕೆ ಹೆಚ್ಚಾಗಿದೆ.

ಇದಲ್ಲದೆ, ವಿಶ್ವ ಆರ್ಥಿಕ ವೇದಿಕೆಯ (WEF) Travel & Tourism Development Index 2024ನಲ್ಲಿ ಭಾರತವು 119 ರಾಷ್ಟ್ರಗಳ ಪೈಕಿ 39ನೆಯ ಸ್ಥಾನಕ್ಕೇರಿದ್ದು, 2013ರ 65ನೆಯ ಸ್ಥಾನದಿಂದ ಗಮನಾರ್ಹ ಪ್ರಗತಿ ಸಾಧಿಸಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ (SAARC) ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ನೀತಿ ಮತ್ತು ಮೂಲಸೌಕರ್ಯ ಸುಧಾರಣೆಗೆ ಸರಕಾರ ಕ್ರಮ ಕೈಗೊಳ್ಳುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!