ಸಿಕ್ಕಿಂ ರಾಜ್ಯವು ಪ್ರಪ್ರಥಮ ಬಾರಿಗೆ ʼಹೈ-ಅಲ್ಟಿಟ್ಯೂಡ್ ಸುಪರ್‌ಕಾರ್ ರ‍್ಯಾಲಿʼ ಆಯೋಜಿಸಲು ಸಜ್ಜಾಗಿದೆ. ಲ್ಯಾಂಬರ್ಗಿನಿ, ಪೋರ್ಷೆ ಸೇರಿದಂತೆ ಸುಮಾರು 17 ರಿಂದ 18 ಅತ್ಯಾಧುನಿಕ ಕಾರುಗಳು ಭಾಗವಹಿಸಲಿರುವ ಈ ರ‍್ಯಾಲಿಯು, ಭಾರತದ ಯುದ್ಧಭೂಮಿ ಮತ್ತು ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ರ‍್ಯಾಲಿ ಪಶ್ಚಿಮ ಬಂಗಾಳದ ಸುಕ್ನಾದಿಂದ ಪ್ರಾರಂಭವಾಗಿ ಗ್ಯಾಂಗ್‌ಟಾಕ್, ಚೋ-ಲಾ ಪಾಸ್, ನಾಥು-ಲಾ ಪಾಸ್, ಗ್ನಾಥಾಂಗ್ ವ್ಯಾಲಿ, ಜುಲುಕ್ ಸೇರಿದಂತೆ ಹಿಮಾಲಯದ ಕಡಿದಾದ ಮತ್ತು ಐತಿಹಾಸಿಕ ಮಾರ್ಗಗಳ ಮೂಲಕ ನಾಲ್ಕು ದಿನಗಳ ಕಾಲ ಸಾಗಲಿದೆ.

Super car rally at Sikkim


1967ರಲ್ಲಿ ಇಂಡೋ–ಚೀನಾ ನಡುವೆ ನಡೆದ ಯುದ್ಧತಾಣ ಚೋ-ಲಾ ಪಾಸ್‌ ಈ ರ‍್ಯಾಲಿಯ ಪ್ರಮುಖ ಆಕರ್ಷಣೆ. ಗಡಿ ಪ್ರದೇಶಗಳ ನೈಸರ್ಗಿಕ ಸೌಂದರ್ಯ ಮತ್ತು ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ರ‍್ಯಾಲಿಯು ಸಿಕ್ಕಿಂ ಮತ್ತು ಉತ್ತರ–ಪೂರ್ವ ಭಾರತದ ಪ್ರವಾಸೋದ್ಯಮದತ್ತ ಜಗತ್ತಿನ ಗಮನ ಸೆಳೆಯಲು ಸಹಕಾರಿಯಾಗಲಿದೆ ಎಂದು ರಾಜ್ಯ ಸರಕಾರ ಮತ್ತು ರ‍್ಯಾಲಿಯ ಆಯೋಜಕರು ತಿಳಿಸಿದ್ದಾರೆ. ಇಲ್ಲಿಯ ಸ್ಥಳೀಯ ಸಮುದಾಯಗಳು, ಹೋಮ್‌ಸ್ಟೇಗಳು ಮತ್ತು ಟೂರಿಸ್ಟ್‌ ಗೈಡ್‌ಗಳು ಹೆಚ್ಚಿನ ಪ್ರವಾಸಿಗರ ಆಗಮನದಿಂದ ಲಾಭ ಪಡೆಯುವ ನಿರೀಕ್ಷೆ ಇದೆ.