ಗೋವಾ: ಭಾರತದ `ಕಡಲತೀರದ ಸ್ವರ್ಗ' ಗೋವಾದಲ್ಲಿ ಆಫ್-ಸೀಸನ್‌ ವೇಳೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆದರೆ ಪೀಕ್ ಸೀಸನ್ ಪ್ರವಾಸೋದ್ಯಮಕ್ಕೆ ವಿಮಾನ ದರ ಏರಿಕೆಯಿಂದ ಹೊಡೆದ ಬಿದ್ದಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ವಿಷಯವನ್ನು ಕೇಂದ್ರದೊಂದಿಗೆ ಚರ್ಚಿಸಲು ನಿರ್ಧರಿಸಿದ್ದು, ಪೀಕ್ ಸೀಸನ್‌ನಲ್ಲಿ ಕೈಗೆಟುಕುವ ವಿಮಾನ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

goa trip

ಅಲ್ಲದೆ ದೆಹಲಿಯಿಂದ ಗೋವಾಕ್ಕೆ ಹೋಗಿ ಬರಲು ಸುಮಾರು 8,000 ರೂ. ವೆಚ್ಚವಾಗುತ್ತದೆ. ಸೀಸನ್‌ ನಲ್ಲಿ ಅಂದರೆ ನವೆಂಬರ್ ಮತ್ತು ಫೆಬ್ರವರಿ ನಡುವೆ, ವಿಮಾನ ದರಗಳು ದ್ವಿಗುಣವಾಗುತ್ತಿದ್ದು, ಅಥವಾ ಅದಕ್ಕಿಂತ ಹೆಚ್ಚಾಗಿಯೇ ಇರಲಿದ್ದು, ದೇಶೀಯ ಪ್ರಯಾಣವನ್ನು ದುಬಾರಿಯಾಗಿಸುತ್ತದೆ. ಇದು ಪ್ರವಾಸಿಗರನ್ನು ನೆರೆಯ ಶ್ರೀಲಂಕಾದಂತಹ ಅಂತರರಾಷ್ಟ್ರೀಯ ತಾಣಗಳತ್ತ ಮುಖ ಮಾಡುವಂತೆ ಒತ್ತಾಯಿಸುತ್ತದೆ. ಅಲ್ಲದೆ ರಾಜ್ಯದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.