ಗೂಗಲ್ ತನ್ನ Google Maps ಸೇವೆಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಪ್ರವಾಸ ಯೋಜನೆ ಮತ್ತು ದೈನಂದಿನ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸಿದೆ. 'Ask Maps' ಎಂಬ ಹೊಸ ಎಐ ಸಹಾಯಕದ ಮೂಲಕ ಬಳಕೆದಾರರು ರೆಸ್ಟೋರೆಂಟ್ ಹುಡುಕುವುದು, ಆಹಾರ ಆರ್ಡರ್ ಮಾಡುವುದು, ಹೊಟೇಲ್ ಬುಕಿಂಗ್‌ ಮಾಡುವುದು ಮತ್ತು ಪ್ರವಾಸದ ಸಂಪೂರ್ಣ ಯೋಜನೆಯನ್ನು ಒಂದೇ ವೇದಿಕೆಯಲ್ಲಿ ರೂಪಿಸಬಹುದಾಗಿದೆ.

1 (4)

ಭಾರತೀಯ ಬಳಕೆದಾರರಿಗಾಗಿ ವಿಶೇಷವಾಗಿ ಹಿಂದಿ ಭಾಷೆ ಬೆಂಬಲ ಸೇರಿಸಲಾಗಿದೆ. ಇಂಗ್ಲಿಷ್ ಬದಲು ಹಿಂದಿಯಲ್ಲೇ ಪ್ರಶ್ನೆ ಕೇಳಿ ಪ್ರವಾಸಿ ತಾಣಗಳು, ಹೊಟೇಲ್‌ಗಳು ಅಥವಾ ಊಟದ ಸ್ಥಳಗಳ ಕುರಿತು ಮಾಹಿತಿ ಪಡೆಯಬಹುದು. ಜತೆಗೆ, ಬಳಕೆದಾರರ ಅನುಮತಿಯೊಂದಿಗೆ Gmail‌ನಲ್ಲಿರುವ ವಿಮಾನ ಅಥವಾ ಹೊಟೇಲ್ ಬುಕಿಂಗ್ ಮಾಹಿತಿಯನ್ನು ಬಳಸಿಕೊಂಡು Personal Intelligence ವೈಶಿಷ್ಟ್ಯವು ವೈಯಕ್ತಿಕ ಪ್ರವಾಸ ಸಲಹೆಗಳನ್ನು ನೀಡುತ್ತದೆ.

ಇದರೊಂದಿಗೆ ಬಸ್‌, ಮೆಟ್ರೋ, ರೈಲು ಹಾಗೂ ದೋಣಿ ಸೇವೆಗಳ ನೇರ (Real-time) ಸಂಚಾರ ಮಾಹಿತಿ ಕೂಡ ಲಭ್ಯವಾಗಲಿದ್ದು, ವಿಳಂಬ ಅಥವಾ ವೇಳಾಪಟ್ಟಿ ಬದಲಾವಣೆಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು. ರೆಸ್ಟೋರೆಂಟ್ ಆಯ್ಕೆ ಮಾಡಿದ ಬಳಿಕ ಬೇಕಾದ ಆಹಾರವನ್ನು ನೇರವಾಗಿ ಕಾರ್ಟ್‌ಗೆ ಸೇರಿಸಿ ಆರ್ಡರ್ ಮಾಡುವ ಸೌಲಭ್ಯವೂ ಲಭ್ಯವಾಗಲಿದೆ. ಗೂಗಲ್‌ನ ಈ ಹೊಸ ಎಐ ಆಧಾರಿತ ವೈಶಿಷ್ಟ್ಯಗಳು 150ಕ್ಕೂ ಹೆಚ್ಚು ದೇಶಗಳಲ್ಲಿ ಹಂತ ಹಂತವಾಗಿ ಜಾರಿಯಾಗುತ್ತಿದ್ದು, ಭಾರತದಲ್ಲಿಯೂ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.