ಸ್ವರ್ಣಮಂದಿರಕ್ಕೆ ಲಾರ್ಡ್ ಕರ್ಜನ್ ನೀಡಿದ್ದ ಗಡಿಯಾರ ಮತ್ತೆ ರೆಡಿ
ಈ ಗಡಿಯಾರದ ಪುನಃಸ್ಥಾಪನೆಗೆ ಸುಮಾರು 96 ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ. ಕೈಯಿಂದ ಚಿತ್ರಿಸಿದ ಪಂಜಾಬಿ ಅಂಕಿಗಳನ್ನು ಹೊಂದಿರುವ ಅಲ್ಯೂಮಿನಿಯಂ ಮೇಲ್ಪದರಕ್ಕೆ ಹಿತ್ತಾಳೆ ಬಳಸಿ, ರೋಮನ್ ಅಂಕಿಗಳಿಂದ ಬದಲಾಯಿಸಲಾಗಿದೆ. ಲಾರ್ಡ್ ಕರ್ಜನ್ ಅದನ್ನು ಹಸ್ತಾಂತರಿಸಿದಾಗ ಹೇಗೆ ಇತ್ತೋ, ಅದೇ ರೀತಿ ಮಾಡಲಾಗಿದೆ.
ಭಾರತದ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ಅವರು ಇಲ್ಲಿನ ಸ್ವರ್ಣಮಂದಿರಕ್ಕೆ ಉಡುಗೊರೆಯಾಗಿ ನೀಡಿದ್ದ 123 ವರ್ಷಗಳ ಪುರಾತನ ಗಡಿಯಾರವನ್ನು ಎರಡು ವರ್ಷಗಳ ನಂತರ ಪುನಃಸ್ಥಾಪಿಸಲಾಗಿದೆ.
ನಿಂತು ಹೋಗಿದ್ದ ಗಡಿಯಾರವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಲ್ಕಿಂಗ್‌ಟನ್ ಕೋ ಲಿಮಿಟೆಡ್‌ಗೆ ಒಯ್ದು ರಿಪೇರಿ ಮಾಡಿಸಲಾಗಿದೆ. ಗಡಿಯಾರದ ಡಯಲ್‌ಗಳನ್ನು ತೆಗೆದುಹಾಕಿ ಅಲ್ಯೂಮಿನಿಯಮ್ ಡಯಲ್‌ಗಳೊಂದಿಗೆ ಬದಲಾಯಿಸಲಾಗಿದೆ. ಅಲ್ಲದೇ ಇದಕ್ಕೆ ಮೊದಲು ಕೀ ಕೊಡಬೇಕಿತ್ತು, ಈಗ ಅದನ್ನು ಬ್ಯಾಟರಿಗೆ ಪರಿವರ್ತಿಸಲಾಗಿದೆ. ಈ ಗಡಿಯಾರದ ಪುನಃಸ್ಥಾಪನೆಗೆ ಸುಮಾರು 96 ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ. ಕೈಯಿಂದ ಚಿತ್ರಿಸಿದ ಪಂಜಾಬಿ ಅಂಕಿಗಳನ್ನು ಹೊಂದಿರುವ ಅಲ್ಯೂಮಿನಿಯಂ ಮೇಲ್ಪದರಕ್ಕೆ ಹಿತ್ತಾಳೆ ಬಳಸಿ, ರೋಮನ್ ಅಂಕಿಗಳಿಂದ ಬದಲಾಯಿಸಲಾಗಿದೆ. ಲಾರ್ಡ್ ಕರ್ಜನ್ ಅದನ್ನು ಹಸ್ತಾಂತರಿಸಿದಾಗ ಹೇಗೆ ಇತ್ತೋ, ಅದೇ ರೀತಿ ಮಾಡಲಾಗಿದೆ.
ಮುಂಬರುವ ತಿಂಗಳಿನಲ್ಲಿ ಈ ಗಡಿಯಾರವನ್ನು ಗರ್ಭಗೃಹದಲ್ಲಿ ಇಡಲಾಗುವುದೆಂದು ತಿಳಿದುಬಂದಿದೆ. ಲಾರ್ಡ್ ಕರ್ಜನ್ ಅವರು 1899 ರಿಂದ 1905 ರವರೆಗೆ ಭಾರತದ ವೈಸ್‌ರಾಯ್ ಆಗಿದ್ದರು.