Monday, November 3, 2025
Monday, November 3, 2025

ಲಂಡನ್ ವಿಶ್ವ ಪ್ರವಾಸಿ ಮೇಳದಲ್ಲಿ ಆಂಧ್ರಪ್ರದೇಶ ಭಾಗಿ

ಈ ಬಾರಿಯ ವಿಶ್ವ ಪ್ರವಾಸಿ ಮೇಳದಲ್ಲಿ ಆಂಧ್ರಪ್ರದೇಶ ಪೆವಿಲಿಯನ್ ವಿಶೇಷ ಆಕರ್ಷಣೆಯಾಗಲಿದೆ. ಇಲ್ಲಿ ಅರಕು ವ್ಯಾಲಿ, ಗಂಡಿಕೋಟ, ಅಮರಾವತಿ, ವಿಶಾಖಪಟ್ಟಣದ ಸಮುದ್ರ ತೀರಗಳು ಸೇರಿದಂತೆ ರಾಜ್ಯದ ವಿವಿಧ ನೈಸರ್ಗಿಕ ತಾಣಗಳು, ಪೌರಾಣಿಕ ಸ್ಥಳಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ.

ಆಂಧ್ರಪ್ರದೇಶವು ತನ್ನ ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ವೈಭವವನ್ನು ವಿಶ್ವ ಮಟ್ಟದಲ್ಲಿ ಪ್ರದರ್ಶಿಸಲು ಸಜ್ಜಾಗಿದೆ. ಸಚಿವ ಕಂದುಲ ದುರ್ಗೇಶ್ ಅವರು ನವೆಂಬರ್ 4ರಿಂದ 6ರವರೆಗೆ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಪ್ರವಾಸಿ ಮೇಳ (World Travel Market – WTM) 2025 ರಲ್ಲಿ ಆಂಧ್ರಪ್ರದೇಶವು ಪಾಲ್ಗೊಳ್ಳಲಿರುವ ಬಗ್ಗೆಮಾಹಿತಿ ನೀಡಿದರು.

ಸಚಿವ ದುರ್ಗೇಶ್ ಅವರ ನೇತೃತ್ವದ ರಾಜ್ಯದ ಪ್ರತಿನಿಧಿ ಮಂಡಳಿ, ಈ ಮೂರು ದಿನಗಳ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯವು ಸುಸ್ಥಿರ ಮತ್ತು ಡಿಜಿಟಲ್ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಜಾಗತಿಕ ಅವಕಾಶಗಳ ಬಗ್ಗೆ ಅನ್ವೇಷಣೆ ನಡೆಸಲಿದೆ.

ಲಂಡನ್ ಭೇಟಿಯ ಸಮಯದಲ್ಲಿ, ಸಚಿವರು ಸುಮಾರು 30 ಅಂತಾರಾಷ್ಟ್ರೀಯ ಪ್ರತಿನಿಧಿಗಳೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುವ ಜಾಗತಿಕ ಹೂಡಿಕೆದಾರರಿಗೆ ಆಂಧ್ರಪ್ರದೇಶ ಸರ್ಕಾರದ ಪ್ರಗತಿಪರ ನೀತಿಗಳನ್ನು ಹಾಗೂ ಉಪಕ್ರಮಗಳನ್ನು ಪರಿಚಯಿಸಲಿದ್ದಾರೆ.

Andhra Pradesh Beaches


ಈ ಬಾರಿಯ ವಿಶ್ವ ಪ್ರವಾಸಿ ಮೇಳದಲ್ಲಿ ಆಂಧ್ರಪ್ರದೇಶ ಪೆವಿಲಿಯನ್ ವಿಶೇಷ ಆಕರ್ಷಣೆಯಾಗಲಿದೆ. ಇಲ್ಲಿ ಅರಕು ವ್ಯಾಲಿ, ಗಂಡಿಕೋಟ, ಅಮರಾವತಿ, ವಿಶಾಖಪಟ್ಟಣದ ಸಮುದ್ರ ತೀರಗಳು ಸೇರಿದಂತೆ ರಾಜ್ಯದ ವಿವಿಧ ನೈಸರ್ಗಿಕ ತಾಣಗಳು, ಪೌರಾಣಿಕ ಸ್ಥಳಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ಭೇಟಿ ನೀಡುವ ಅತಿಥಿಗಳಿಗೆ ಕುಚಿಪುಡಿ ನೃತ್ಯ ಪ್ರದರ್ಶನ, ಅರಕು ಕಾಫಿ, ಪೂತರೆಕುಲು ಸಿಹಿತಿಂಡಿ ಮತ್ತು ಎಟಿಕೊಪ್ಪಾಕ, ಕೊಂಡಪಳ್ಳಿ ಹಸ್ತಕಲೆಗಳ ಸ್ಮರಣಿಕೆಗಳು ನೀಡುವ ಮೂಲಕ ಆಂಧ್ರ ಸಂಸ್ಕೃತಿಯ ಸೊಗಡು ಪರಿಚಯಿಸಲಾಗುತ್ತದೆ.

ಪ್ರವಾಸೋದ್ಯಮ ಇಲಾಖೆಯ ವಿಶೇಷ ಕಾರ್ಯದರ್ಶಿ ಅಜಯ್ ಜೈನ್ ಅವರೂ ಸಹ ಸಚಿವರೊಂದಿಗೆ ಭಾಗವಹಿಸಲಿದ್ದಾರೆ. ಲಂಡನ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬಹುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದೆಂಬ ವಿಶ್ವಾಸವನ್ನು ಸಚಿವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!