ರೈಲಿನ ಫಸ್ಟ್ ಎಸಿ ಕೂಪ್‌ನಲ್ಲಿ 'ಹನಿಮೂನ್' ಸಿದ್ಧತೆ: ಟಿಟಿಇ ಅಮಾನತು
ಜುಲೈ 6ರಂದು ಪ್ರಯಾಣಿಸುತ್ತಿದ್ದ ದಂಪತಿ, ಆನ್‌ಲೈನ್ ಮೂಲಕ ಅಲಂಕಾರ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಫಸ್ಟ್ ಎಸಿ ಖಾಸಗಿ ಕೂಪ್‌ನಲ್ಲಿ ಅಲಂಕರಿಸುವ ವ್ಯವಸ್ಥೆ ಮಾಡಿದ್ದರು. ರೈಲು ಮಹಾರಾಷ್ಟ್ರದ ಜಲ್ನಾ ನಿಲ್ದಾಣದಲ್ಲಿದ್ದ ವೇಳೆ ಅನುಮತಿಯಿಲ್ಲದೆ ಅಲಂಕಾರ ಸಿಬ್ಬಂದಿ ಬೋಗಿಗೆ ಪ್ರವೇಶಿಸಿ ಕೂಪ್‌ನ್ನು ವಿಶೇಷವಾಗಿ ಸಜ್ಜುಗೊಳಿಸಿದ್ದರು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತು.
ಮುಂಬೈ ಸಿಎಸ್‌ಎಂಟಿ–ಬಲ್ಹಾರ್ಶಾ ನಡುವಿನ ನಂದಿಗ್ರಾಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕೂಪ್‌ನ್ನು ನವದಂಪತಿಗಾಗಿ ಹೂವುಗಳು, ಬಲೂನುಗಳು ಹಾಗೂ ಪ್ರೇಮದ ಸಂಕೇತಗಳಿಂದ ಅಲಂಕರಿಸಿ 'ಹನಿಮೂನ್ ಸೂಟ್' ಆಗಿ ರೂಪಾಂತರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಕ್ರಮ ಕೈಗೊಂಡಿದೆ.
ಜುಲೈ 6ರಂದು ಪ್ರಯಾಣಿಸುತ್ತಿದ್ದ ದಂಪತಿ, ಆನ್‌ಲೈನ್ ಮೂಲಕ ಅಲಂಕಾರ ಸಂಸ್ಥೆಯನ್ನು ಸಂಪರ್ಕಿಸಿ ತಮ್ಮ ಫಸ್ಟ್ ಎಸಿ ಖಾಸಗಿ ಕೂಪ್‌ನ್ನು ಅಲಂಕರಿಸುವ ವ್ಯವಸ್ಥೆ ಮಾಡಿದ್ದರು. ರೈಲು ಮಹಾರಾಷ್ಟ್ರದ ಜಲ್ನಾ ನಿಲ್ದಾಣದಲ್ಲಿದ್ದ ವೇಳೆ ಅನುಮತಿಯಿಲ್ಲದೆ ಅಲಂಕಾರ ಸಿಬ್ಬಂದಿ ಬೋಗಿಗೆ ಪ್ರವೇಶಿಸಿ ಕೂಪ್‌ನ್ನು ವಿಶೇಷವಾಗಿ ಸಜ್ಜುಗೊಳಿಸಿದ್ದರು. ಈ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತು.
This? pic.twitter.com/XsBDJidyE3
— Jahazi (@Oye_Jahazi) July 8, 2026
ಪ್ರಯಾಣಿಕರ ಭದ್ರತೆ ಮತ್ತು ರೈಲ್ವೇ ಕಾರ್ಯಾಚರಣಾ ನಿಯಮಗಳನ್ನು ಉಲ್ಲಂಘಿಸಿರುವುದು ಅಕ್ಷಮ್ಯವೆಂದು ಪರಿಗಣಿಸಿದ ದಕ್ಷಿಣ ಮಧ್ಯ ರೈಲ್ವೇ ತೀವ್ರವಾಗಿ ಪ್ರತಿಕ್ರಿಯಿಸಿದೆ. ಅನುಮತಿಯಿಲ್ಲದ ವ್ಯಕ್ತಿಗೆ ಫಸ್ಟ್ ಎಸಿ ಬೋಗಿಗೆ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಸಂಬಂಧಿತ ಟಿಕೆಟ್ ಪರೀಕ್ಷಕ (ಟಿಟಿಇ) ಅವರನ್ನು ಅಮಾನತುಗೊಳಿಸಲಾಗಿದೆ. ಜತೆಗೆ, ಈ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ಇಲಾಖಾ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳಿಗೆ ಆಸ್ಪದ ನೀಡಿದೆ. ಕೆಲವರು ನವದಂಪತಿಯ ವಿಭಿನ್ನ ಪ್ರಯತ್ನವನ್ನು ಮೆಚ್ಚಿಕೊಂಡರೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇಂಥ ಅನುಮತಿಯಿಲ್ಲದ ಪ್ರಯತ್ನಗಳನ್ನು ಮಾಡುವುದು, ಭದ್ರತಾ ಮತ್ತು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.