ಭಾರತದ ಪ್ರವಾಸೋದ್ಯಮದ ಬೇಡಿಕೆ ವಿಸ್ತರಣೆ
ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೇಡಿಕೆಯ ಸ್ವರೂಪ ಬದಲಾಗುತ್ತಿದ್ದು, ಸಾಂಪ್ರದಾಯಿಕ ಮನೋರಂಜನೆ ಮತ್ತು ಪಾರಂಪರಿಕ ಪ್ರವಾಸಗಳ ಜತೆಗೆ ಹೊಸ ಮಾದರಿಯ ಪ್ರಯಾಣಗಳು ವೇಗವಾಗಿ ಬೆಳೆಯುತ್ತಿವೆ.
ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೇಡಿಕೆಯ ಸ್ವರೂಪ ಬದಲಾಗುತ್ತಿದ್ದು, ಸಾಂಪ್ರದಾಯಿಕ ಮನೋರಂಜನೆ ಮತ್ತು ಪಾರಂಪರಿಕ ಪ್ರವಾಸಗಳ ಜತೆಗೆ ಹೊಸ ಮಾದರಿಯ ಪ್ರಯಾಣಗಳು ವೇಗವಾಗಿ ಬೆಳೆಯುತ್ತಿವೆ.
ASSOCHAM–CBRE ವರದಿ ಪ್ರಕಾರ, ದೇಶದ ಪ್ರವಾಸೋದ್ಯಮ ಬೇಡಿಕೆ ಈಗ ವಿರಾಮ ಪ್ರವಾಸ, ಧಾರ್ಮಿಕ ಮತ್ತು ಪಾರಂಪರಿಕ ತಾಣಗಳಿಗಷ್ಟೇ ಸೀಮಿತವಾಗದೆ, ಅನುಭವಾಧಾರಿತ ಹಾಗೂ ವಿಶೇಷ ಉದ್ದೇಶದ ಪ್ರಯಾಣಗಳತ್ತ ವಿಸ್ತರಿಸುತ್ತಿದೆ.
ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳ ಭೇಟಿಯೊಂದಿಗೆ ಸಾಹಸ ಪ್ರವಾಸ, ಆಧ್ಯಾತ್ಮಿಕ ಪ್ರವಾಸ, ವೆಲ್‌ನೆಸ್, ವೈದ್ಯಕೀಯ ಪ್ರವಾಸ, ಪ್ರಕೃತಿ ಆಧಾರಿತ ಪ್ರವಾಸ ಮತ್ತು ಅನುಭವಾಧಾರಿತ ಪ್ರಯಾಣಗಳಿಗೆ ಪ್ರವಾಸಿಗರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಇದರಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮಾರುಕಟ್ಟೆಗಳು ಹಾಗೂ ಹೂಡಿಕೆ ಅವಕಾಶಗಳು ರೂಪುಗೊಳ್ಳುತ್ತಿವೆ.
ವರದಿಯ ಪ್ರಕಾರ, ಪ್ರವಾಸಿಗರ ಆದ್ಯತೆಗಳಲ್ಲಿ ಬದಲಾವಣೆಗೆ ಡಿಜಿಟಲ್ ಸಂಪರ್ಕ, ಹೆಚ್ಚುತ್ತಿರುವ ಆದಾಯ, ಸುಧಾರಿತ ಸಾರಿಗೆ ವ್ಯವಸ್ಥೆ ಹಾಗೂ ವಿಭಿನ್ನ ಅನುಭವಗಳನ್ನು ಪಡೆಯುವ ಆಸಕ್ತಿ ಪ್ರಮುಖ ಕಾರಣಗಳಾಗಿವೆ. ದೇಶೀಯ ಪ್ರವಾಸೋದ್ಯಮದ ಜತೆಗೆ ವಿದೇಶಿ ಪ್ರವಾಸಿಗರ ಬೇಡಿಕೆಯಲ್ಲಿಯೂ ವೈವಿಧ್ಯತೆ ಹೆಚ್ಚುತ್ತಿದೆ.
ಪ್ರಮುಖ ನಗರಗಳ ಹೊರತಾಗಿ ಎರಡನೆಯ ಮತ್ತು ಮೂರನೆಯ ಹಂತದ ನಗರಗಳು ಹಾಗೂ ಹೊಸ ಪ್ರವಾಸಿ ತಾಣಗಳು ಕೂಡ ಪ್ರವಾಸೋದ್ಯಮ ನಕ್ಷೆಯಲ್ಲಿ ಹೆಚ್ಚು ಮಹತ್ವ ಪಡೆಯುತ್ತಿವೆ. ಈ ಬೆಳವಣಿಗೆ ಸ್ಥಳೀಯ ಆರ್ಥಿಕತೆ, ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಹೊಸ ಅವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ.