Tuesday, September 8, 2026
Tuesday, September 8, 2026

14,740 ರು.ಗೆ ಅರುಣಾಚಲ ಮೋಕ್ಷ ಯಾತ್ರೆ

ಭಾರತೀಯ ರೈಲ್ವಯ ಪ್ರವಾಸೋದ್ಯಮ ಸಂಸ್ಥೆ ಐಆರ್‌ಸಿಟಿಸಿ ತಮಿಳುನಾಡಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡ ‘ಅರುಣಾಚಲ ಮೋಕ್ಷ ಯಾತ್ರೆ’ ಪ್ಯಾಕೇಜ್ ಘೋಷಿಸಿದೆ. ನಾಲ್ಕು ರಾತ್ರಿ ಹಾಗೂ ಐದು ದಿನಗಳ ಈ ಪ್ರವಾಸಕ್ಕೆ ₹14,740ರಿಂದ ದರ ಆರಂಭವಾಗಲಿದೆ. ಪುದುಚೇರಿ, ತಿರುವಣ್ಣಾಮಲೈ ಮತ್ತು ಕಾಂಚೀಪುರಂ ಪ್ರಮುಖ ತಾಣಗಳಾಗಿವೆ.

ಭಾರತೀಯ ರೈಲ್ವೇ ಪ್ರವಾಸೋದ್ಯಮ ಸಂಸ್ಥೆ ಐಆರ್‌ಸಿಟಿಸಿ ತಮಿಳುನಾಡಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡ ‘ಅರುಣಾಚಲ ಮೋಕ್ಷ ಯಾತ್ರೆ’ ಪ್ಯಾಕೇಜ್ ಘೋಷಿಸಿದೆ. ನಾಲ್ಕು ರಾತ್ರಿ ಹಾಗೂ ಐದು ದಿನಗಳ ಈ ಪ್ರವಾಸಕ್ಕೆ 14,740 ರು. ರಿಂದ ದರ ಆರಂಭವಾಗಲಿದೆ. ಪುದುಚೇರಿ, ತಿರುವಣ್ಣಾಮಲೈ ಮತ್ತು ಕಾಂಚೀಪುರಂ ಪ್ರಮುಖ ತಾಣಗಳಾಗಿವೆ.

ಪ್ರತಿ ಶುಕ್ರವಾರ ಕಾಚಿಗುಡ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ಪ್ರಯಾಣ ಆರಂಭವಾಗಲಿದೆ. ಮೊದಲ ದಿನ ಕಾಚಿಗುಡ–ಪುದುಚೇರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಬೆಳೆಸಲಿದ್ದು, ಎರಡನೇ ದಿನ ಪುದುಚೇರಿ ತಲುಪಿದ ಬಳಿಕ ಅರೋವಿಲ್, ಶ್ರೀ ಅರವಿಂದ ಆಶ್ರಮ ಹಾಗೂ ಪ್ಯಾರಡೈಸ್ ಬೀಚ್ ವೀಕ್ಷಣೆಗೆ ಅವಕಾಶವಿದೆ. ರಾತ್ರಿ ಪುದುಚೇರಿಯಲ್ಲಿ ವಾಸ್ತವ್ಯ ಇರಲಿದೆ.

ಮೂರನೇ ದಿನ ತಿರುವಣ್ಣಾಮಲೈಗೆ ತೆರಳಿ ಅರುಣಾಚಲಂ ದೇವಸ್ಥಾನ ದರ್ಶನ ಮಾಡಬಹುದು. ನಾಲ್ಕನೇ ದಿನ ಕಾಂಚೀಪುರಂಗೆ ತೆರಳಿ ಕಾಮಾಕ್ಷಿ ಅಮ್ಮನ್ ಹಾಗೂ ಏಕಾಂಬರೇಶ್ವರ ದೇವಸ್ಥಾನಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅರಕ್ಕೋಣಂ ರೈಲು ನಿಲ್ದಾಣದಿಂದ ವಾಪಸ್ ಪ್ರಯಾಣ ಆರಂಭವಾಗಲಿದೆ. ಐದನೇ ದಿನ ಬೆಳಗ್ಗೆ 7.50ಕ್ಕೆ ಕಾಚಿಗುಡ ತಲುಪುವುದರೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲಿದೆ.

ಪ್ಯಾಕೇಜ್‌ನಲ್ಲಿ ರೈಲು ಟಿಕೆಟ್, ರಸ್ತೆ ಸಾರಿಗೆ, ಹೊಟೇಲ್ ವಾಸ್ತವ್ಯ, ಊಟ ಮತ್ತು ಪ್ರಯಾಣ ವಿಮೆ ಸೇರಿವೆ. ಸ್ಲೀಪರ್ ಹಾಗೂ 3AC ಆಯ್ಕೆಗಳೂ ಲಭ್ಯವಿದ್ದು, ಪ್ಯಾಕೇಜ್ ದರ ಪ್ರಯಾಣಿಕರ ಸಂಖ್ಯೆ ಮತ್ತು ಕೊಠಡಿ ಹಂಚಿಕೆಯ ಆಧಾರದ ಮೇಲೆ ಬದಲಾಗುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!