ಅಡಿಗಾಸ್ ಯಾತ್ರಾದಲ್ಲಿ ಉದ್ಯೋಗಾವಕಾಶ
ಪ್ರವಾಸಿಗರಿಗೆ ಆಕರ್ಷಕ ಟೂರ್ ಪ್ಯಾಕೇಜ್ಗಳನ್ನು ಆಯೋಜಿಸಿ, ಉತ್ತಮ ಸೇವೆಯನ್ನು ಕಲ್ಪಿಸುವ ಮೂಲಕ ಮನೆಮಾತಾಗಿರುವ ಅಡಿಗಾಸ್ ಯಾತ್ರದಲ್ಲಿ ಉದ್ಯೋಗಾವಕಾಶಗಳಿವೆ. ವಿದ್ಯಾರ್ಹತೆ, ಅನುಭವಗಳ ಬಗೆಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಸಂಸ್ಥೆಯಲ್ಲಿ ನಾನಾ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಇಂತಿದೆ.

ಟೆಲಿ ಸೇಲ್ಸ್ -ಎಕ್ಸಿಕ್ಯುಟಿವ್ : ವೇತನ- ಅನುಭವವನ್ನು ಆಧರಿಸಿ ಮಾಸಿಕ 18,000 ರುಪಾಯಿಗಳಿಂದ 30,000 ರುಪಾಯಿ ತನಕ. ಜತೆಗೆ ಆಕರ್ಷಕ ಇನ್ಸೆಂಟಿವ್ ಲಭ್ಯವಿದೆ. 1-2 ವರ್ಷಗಳ ಅನುಭವ ಇರುವವರಿಗೆ ಆದ್ಯತೆ.
ಟೀಮ್ ಲೀಡರ್-ಸೇಲ್ಸ್ : 2ಕ್ಕೂ ಹೆಚ್ಚು ವರ್ಷ ಅನುಭವ ಅಗತ್ಯ. ಟೂರಿಸಂ ಇಂಡಸ್ಟ್ರಿಯ ಅನುಭವ ಇದ್ದವರಿಗೆ ಆದ್ಯತೆ.
ಸೀನಿಯರ್ ಸೇಲ್ಸ್ ಮ್ಯಾನೇಜರ್: 2ಕ್ಕೂ ಹೆಚ್ಚು ವರ್ಷಗಳ ಅನುಭವ ಅಗತ್ಯ. ಪ್ರವಾಸೋದ್ಯಮದ ಅನುಭವಿಗಳಿಗೆ ಆದ್ಯತೆ. ಬೆಂಗಳೂರು ಕೆಲಸದ ಸ್ಥಳವಾಗಿದೆ.
ಆಸಕ್ತರು adigasyatra@gmail.com ಗೆ ರೆಸ್ಯೂಮ್ ಸಲ್ಲಿಸಬಹುದು. ಅಥವಾ ಈ ವಾಟ್ಸ್ ಆಪ್ ನಂಬರಿಗೆ ಕಳಿಸಬಹುದು: 9611600810