ಕಾಶಿಯಾತ್ರೆ 2ನೇ ಟ್ರಿಪ್ ಬುಕ್ಕಿಂಗ್ ಆರಂಭ
ಕಾಶಿಯಾತ್ರೆಗೆ 22,500 ರು. ಟಿಕೆಟ್ ದರ ನಿಗದಿಯಾಗಿದ್ದು, ವಿಶೇಷ ಕೊಡುಗೆಯಾಗಿ ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರದ ಸಹಾಯಧನ 7,500 ರು. ನೀಡಲಾಗುವುದು.
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಐಆರ್‌ಸಿಟಿಸಿ ರವರ ಸಹಯೋಗದಲ್ಲಿ ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ಆಸಕ್ತ ಪ್ರವಾಸಿಗರಿಗಾಗಿ ಕಳೆದ 3 ವರ್ಷಗಳಿಂದ ಕಾಶಿಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಈ ವರ್ಷದ ಮೊದಲ ಪ್ರವಾಸ ನಡೆದಿದ್ದು, ಸದ್ಯ ಅಕ್ಟೋಬರ್ ತಿಂಗಳಲ್ಲಿ 5 ರಿಂದ 13 ರವರೆಗೆ 9 ದಿನಗಳ ಕಾಲ 2 ನೇ ಕಾಶಿಯಾತ್ರೆ ಆಯೋಜನೆ ಮಾಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಸಬ್ಸಿಡಿ ಲಭ್ಯವಿದೆ. ಬೆಂಗಳೂರಿನಿಂದ ಆರಂಭವಾಗಿ 7 ಜಿಲ್ಲೆಗಳ ಮೂಲಕ ಹಾದುಹೋಗುವ ಈ ರೈಲು ಯಾತ್ರೆಯಲ್ಲಿ ವಾರಣಾಸಿ, ಅಯೋಧ್ಯೆ, ಗಯಾ, ಪ್ರಯಾಗ್‌ರಾಜ್‌ನ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಬಹುದು. ಕಾಶಿಯಾತ್ರೆಗೆ 22,500 ರು. ಟಿಕೆಟ್ ದರ ನಿಗದಿಯಾಗಿದ್ದು, ವಿಶೇಷ ಕೊಡುಗೆಯಾಗಿ ಕರ್ನಾಟಕದ ನಿವಾಸಿ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರದ ಸಹಾಯಧನ 7,500 ರು. ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ www.irctctourism.com ಸಂಪರ್ಕಿಸಬಹುದು.