ಕೇಸರಿ ಟೂರ್ಸ್‌ ಈ ವರ್ಷದ ʼಅತ್ತ್ಯುತ್ತಮ ಅಂತರಾಷ್ಟ್ರೀಯ ಪ್ರವಾಸ ನಿರ್ವಾಹಕʼ ಪ್ರಶಸ್ತಿಗೆ ಭಾಜನವಾಗಿದೆ. ಪ್ರವಾಸ ವಲಯದಲ್ಲಿ ಅತ್ತ್ಯುತ್ತಮ ಕೊಡುಗೆ ನೀಡುವ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯ ಲೆ ಮೆರಿಡಿಯನ್ ಹೊಟೇಲ್ ನಲ್ಲಿ ನಡೆಯಿತು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೆಂದ್ರಸಿಂಗ್ ಶೇಖಾವತ್ ಅವರು ಕೇಸರಿ ಟೂರ್ಸ್‌ ನ ನಿರ್ದೇಶಕ ಹಿಮಾಂಶು ಕೇಸರಿ ಪಾಟೀಲ್‌ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿಮಾಂಶು ಅವರು-“ತಂಡದ ಸದಸ್ಯರ ಬದ್ಧತೆ, ಪರಿಶ್ರಮ ಮತ್ತು ಪ್ರವಾಸಿಗರ ನಂಬಿಕೆಯಿಂದ ಈ ಗೌರವ ಸಂದಿದೆ, ಈ ಹಿರಿಮೆ ಎಲ್ಲರಿಗೂ ಸಲ್ಲಬೇಕು” ಎಂದರು.

ಕೇಸರಿ ಟೂರ್ಸ್ ಪ್ರೈವೇಟ್ ಲಿಮಿಟೆಡ್ ಭಾರತದ ಪ್ರಮುಖ ಪ್ರವಾಸ ಸಂಸ್ಥೆಗಳಲ್ಲಿ ಒಂದಾಗಿದ್ದು, 1984ರಲ್ಲಿ ಮುಂಬೈಯಲ್ಲಿ ಸ್ಥಾಪನೆಯಾಯಿತು. ಕಳೆದ ನಾಲ್ಕು ದಶಕಗಳಲ್ಲಿ, ಈ ಸಂಸ್ಥೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸ, ಕಸ್ಟಮೈಸ್ ಹಾಲಿಡೇಸ್, ಕಾರ್ಪೊರೇಟ್ ಪ್ರವಾಸಗಳ ಅತ್ತ್ಯುತ್ತಮ ನಿರ್ವಹಣೆಯ ಮೂಲಕ ತನ್ನದೇ ಆದ ಹೆಗ್ಗಳಿಕೆಯನ್ನು ಗಳಿಸಿದೆ.