ಶಿಮ್ಲಾ-ಕಲ್ಕಾ ಟಾಯ್ ರೈಲು ಮಾರ್ಗದಲ್ಲಿ ಭೂಕುಸಿತ
ರೈಲಿನಲ್ಲಿ ಸಿಲುಕಿದ್ದ ನೂರಾರು ಪ್ರವಾಸಿಗರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಎಚ್ಚೆತ್ತ ರೈಲ್ವೆ ಇಲಾಖೆ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆತಂದವು.
ವಿಶ್ವವಿಖ್ಯಾತ ಯುನೆಸ್ಕೋ ಪಾರಂಪರಿಕ ತಾಣವಾಗಿರುವ ಹಿಮಾಚಲ ಪ್ರದೇಶದ ಶಿಮ್ಲಾ-ಕಲ್ಕಾ ರೈಲು ಮಾರ್ಗದಲ್ಲಿ (Shimla-Kalka Toy Train) ಭಾರಿ ಭೂಕುಸಿತ ಸಂಭವಿಸಿದೆ. ಪ್ರಕೃತಿಯ ಮುನಿಸಿನಿಂದಾಗಿ ಹಳಿಗಳ ಮೇಲೆ ಬೃಹತ್ ಬಂಡೆಗಳು ಮತ್ತು ಮಣ್ಣು ಕುಸಿದುಬಿದ್ದ ಪರಿಣಾಮ, ಮಾರ್ಗಮಧ್ಯೆ ಸಿಲುಕಿಕೊಂಡಿದ್ದ ವಿವಿಧ ರೈಲುಗಳಲ್ಲಿದ್ದ ಒಟ್ಟು 400ಕ್ಕೂ ಅಧಿಕ ಪ್ರಯಾಣಿಕರನ್ನು ರೈಲ್ವೇ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಅತ್ಯಂತ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಇದನ್ನೂ ಓದಿ: 50 ರು.ಗೆ ಕಲ್ಕಾ-ಶಿಮ್ಲಾ ಟಾಯ್ ಟ್ರೇನ್
ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಶಿಮ್ಲಾ ಮತ್ತು ಕಲ್ಕಾ ನಡುವಿನ ಪರ್ವತ ಪ್ರದೇಶದ ಹಳಿಗಳ ಮೇಲೆ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಉರುಳಿಬಿದ್ದವು. ಇದರಿಂದಾಗಿ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟಾಯ್ ರೈಲುಗಳು ಮಧ್ಯದಾರಿಯಲ್ಲೇ ನಿಲ್ಲಿಸುವಂತಾಯಿತು.
ರೈಲಿನಲ್ಲಿ ಸಿಲುಕಿದ್ದ ನೂರಾರು ಪ್ರವಾಸಿಗರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಎಚ್ಚೆತ್ತ ರೈಲ್ವೆ ಇಲಾಖೆ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆತಂದವು. ಪ್ರಯಾಣಿಕರ ಸುರಕ್ಷತೆಯನ್ನು ಮುನ್ನೆಚ್ಚರಿಕೆಯಾಗಿ ಪರಿಗಣಿಸಿ, ಶಿಮ್ಲಾ-ಕಲ್ಕಾ ನಡುವಿನ ಎಲ್ಲಾ ಟಾಯ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಳಿಗಳ ಮೇಲೆ ಬಿದ್ದಿರುವ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸುವ ಹಾಗೂ ಹಳಿಗಳ ಸುರಕ್ಷತೆಯನ್ನು ಪರಿಶೀಲಿಸುವ ಕಾಮಗಾರಿಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ.