Thursday, February 26, 2026
Thursday, February 26, 2026

ಉದಯಪುರಕ್ಕೆ ಪ್ರವಾಸಿಗರ ದಂಡು

ಉದಯಪುರದ ಹೊಟೇಲ್ಸ್, ರೆಸಾರ್ಟ್ಸ್ ಬುಕಿಂಗ್ ನಲ್ಲಿ ಬಾರಿ ಏರಿಕೆ ಕಂಡಿದ್ದು, ಆತಿಥ್ಯ ಕ್ಷೇತ್ರ ಸಂತಸವನ್ನು ವ್ಯಕ್ತಪಡಿಸಿದೆ. ಕಳೆದ ಮೂರು ವರ್ಷದಲ್ಲಿ ಕಂಡ ಮೂಲಸೌಕರ್ಯ ಅಭಿವೃದ್ಧಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಲ ನೀಡಿದೆ.

ರಾಜಸ್ಥಾನದ ಉದಯಪುರದ ಪ್ರವಾಸೋದ್ಯಮ ಈ ವರ್ಷ ದಾಖಲೆ ಸೃಷ್ಟಿಸಿದೆ. 16 ವರ್ಷಗಳ ನಂತರ ಅತಿ ಹೆಚ್ಚು ಪ್ರವಾಸಿಗರು ಲೇಕ್ ಸಿಟಿಗೆ ಆಗಮಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಜನವರಿ ತಿಂಗಳಲ್ಲಿ 2,44,558 ಪ್ರವಾಸಿಗರು ಉದಯಪುರಕ್ಕೆ ಆಗಮಿಸಿದ್ದಾರೆ. ಇದರಲ್ಲಿ 19,558 ವಿದೇಶಿ ಪ್ರವಾಸಿಗರು ಎಂಬುದೇ ಗಮನಾರ್ಹ ವಿಷಯ. ಉದಯಪುರದ ಹೊಟೇಲ್ಸ್, ರೆಸಾರ್ಟ್ಸ್ ಬುಕಿಂಗ್ ನಲ್ಲಿ ಬಾರಿ ಏರಿಕೆ ಕಂಡಿದ್ದು, ಆತಿಥ್ಯ ಕ್ಷೇತ್ರ ಸಂತಸವನ್ನು ವ್ಯಕ್ತಪಡಿಸಿದೆ. ಕಳೆದ ಮೂರು ವರ್ಷದಲ್ಲಿ ಕಂಡ ಮೂಲಸೌಕರ್ಯ ಅಭಿವೃದ್ಧಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಲ ನೀಡಿದೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯನ್ನು ಗಮನದಲ್ಲಿರಿಸಿ, ಉದಯಪುರವನ್ನು ಜಾಗತಿಕ ಆಕರ್ಷಣೆ ಕೇಂದ್ರ ಬಿಂದುವಾಗಿ ರೂಪಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!