ನವೆಂಬರ್‌ 21ರಂದು ಮಣಿಪುರದ ಇಂಫಾಲದಲ್ಲಿ ಆರಂಭವಾದ 12ನೇ Sangai Tourism Festival 2025 ನವೆಂಬರ್‌ 30ರಂದು ಯಶಸ್ವಿಯಾಗಿ ಮುಕ್ತಾಯವಾಯಿತು. ಈ ಸಂಭ್ರಮೋತ್ಸವವು ಮಣಿಪುರ ರಾಜ್ಯದ ಸಂಸ್ಕೃತಿ, ಪರಂಪರೆ ಹಾಗೂ ಅತ್ಯದ್ಭುತ ಪ್ರವಾಸಿ ತಾಣಗಳ ಪ್ರಾಮುಖ್ಯತೆಯ ಬಗ್ಗೆ ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯವನ್ನು ನೀಡಿತು.

ಪ್ರತಿಭಟನೆಗಳ ಕಾವಿನಲ್ಲೂ ಅತ್ಯಂತ ಯಶಸ್ವಿಯಾಗಿ ಜರುಗಿದ ಈ ಕಾರ್ಯಕ್ರಮ ಮಣಿಪುರದ ವಾಸಿಗಳಿಗೆ ಮತ್ತು ಭೇಟಿ ನೀಡಿದ ಪ್ರವಾಸಿಗರಿಗೆ ಏಕತೆಯ ಸಂದೇಶವನ್ನು ರವಾನಿಸಿತು. ಪ್ರವಾಸೋದ್ಯಮ, ಹೊಟೇಲ್‌, ಸಾರಿಗೆ, ಕೈಗಾರಿಕೆ ಮತ್ತು ಸ್ಥಳೀಯ ವೃತ್ತಿಗಳಿಗೆ ಹೊಸ ಆಯಾಮ ನೀಡುವುದರೊಟ್ಟಿಗೆ ರಾಜ್ಯದ ಆರ್ಥಿಕತೆಯನ್ನು ಬಲಪಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು.

Manipur Sangai Festival


ಈ ಫೆಸ್ಟಿವಲ್‌ನಲ್ಲಿ ನಡೆದ ಹಲವು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾರಂಪರಿಕ ಕ್ರೀಡೆಗಳು, ಮಹಿಳೆಯರ ಹಸ್ತಶಿಲ್ಪ, ಸ್ಥಳೀಯ ಖಾದ್ಯಗಳು, ಸುಸ್ಥಿರ ಹಾಗೂ ಇಕೋ ಟೂರಿಸಂ ಬಗೆಗಿನ ಅರ್ಥಪೂರ್ಣ ಸಂವಾದಗಳು ಭೇಟಿ ನೀಡಿದ ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾದವು.