Saturday, December 13, 2025
Saturday, December 13, 2025

ಎಂಎಸ್ ಧೋನಿ ಈಗ ಜಾರ್ಖಂಡ್ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ

ಜಾರ್ಖಂಡ್ ಪ್ರವಾಸೋದ್ಯಮ ಇಲಾಖೆ ನೂತನ ಪ್ರಚಾರ ರಾಯಭಾರಿಯನ್ನು ಅಂತಿಮಗೊಳಿಸಿದೆ. ಜಾರ್ಖಂಡ್‌ ಮೂಲದ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಪ್ರಚಾರ ರಾಯಭಾರಿಯಾಗಿ ನೇಮಿಸುವ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಉದ್ದೇಶವನ್ನು ಹೊಂದಿದೆ.

ಜಾರ್ಖಂಡ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ, ಜಾಗತಿಕ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ, ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಜಾರ್ಖಂಡ್ ಪ್ರವಾಸೋದ್ಯಮದ ಅಧಿಕೃತ ಬ್ರಾಂಡ್ ಅಂಬಾಸಿಡರ್‌ ಆಗಿ ನೇಮಿಸಿಲಾಗಿದೆ. ಜಾರ್ಖಂಡ್ ನ ಸಂಸ್ಕೃತಿ, ಶತಮಾನಗಳಷ್ಟು ಹಳೆಯ ಇತಿಹಾಸ, ಕಾಡುಗಳು, ಜಲಪಾತಗಳು ಮತ್ತು ವಿಶೇಷ ಪ್ರವಾಸಿ ತಾಣಗಳತ್ತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವಂತೆ ಮಾಡುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.

dhoni ms

ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ

ಜಾರ್ಖಂಡ್‌ನ ರಾಜಧಾನಿ ರಾಂಚಿಯ ಮೂಲದ ಧೋನಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೆಚ್ಚು ಪೂಜಿಸಲ್ಪಡುತ್ತಾರೆ. ಕ್ರಿಕೆಟ್‌ ರಂಗದಲ್ಲಿ ಗುರುತಿಸಿಕೊಂಡರೂ ತನ್ನೂರು ಜಾರ್ಖಂಡ್‌ನೊಂದಿಗಿನ ಅವರ ಸಂಬಂಧ ಬಹಳ ಆಪ್ತವಾಗಿದೆ. ಧೋನಿಯ ಜನಪ್ರಿಯತೆಯಿಂದ ಪ್ರೇರಿತವಾದ ಜಾರ್ಖಂಡ್ ಸರ್ಕಾರ ರಾಜ್ಯವನ್ನು ಸಾಹಸ, ಪರಿಸರ, ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರವಾಸೋದ್ಯಮಗಳಲ್ಲಿ ತೆರೆದುಕೊಂಡು, ಇರುವ ಪ್ರವಾಸಿ ತಾಣಗಳ ಜತೆಗೆ ಇನ್ನಷ್ಟು ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!