Wednesday, October 29, 2025
Wednesday, October 29, 2025

ದೇಶದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ

ಭಾರತದಲ್ಲಿ ಪಾಸ್‌ಪೋರ್ಟ್ (Passport) ಸಂಬಂಧಿತ ಸೇವೆಗಳನ್ನು ನೀಡುವ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಪ್ರಸ್ತುತ ದೇಶಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಎಕ್ಸ್‌ನಲ್ಲಿ (X) ಈ ಕುರಿತು ನೂರಾರು ಬಳಕೆದಾರರು ಈ ಕುರಿತು ಪೋಸ್ಟ್‌ ಮಾಡಿ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ: ಭಾರತದಲ್ಲಿ ಪಾಸ್‌ಪೋರ್ಟ್ (Passport seva portal) ಸಂಬಂಧಿತ ಸೇವೆಗಳನ್ನು ನೀಡುವ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಪ್ರಸ್ತುತ ದೇಶಾದ್ಯಂತ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಎಕ್ಸ್‌ನಲ್ಲಿ ಈ ಕುರಿತು ನೂರಾರು ಬಳಕೆದಾರರು ಪೋಸ್ಟ್‌ ಮಾಡಿ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಗುರುವಾರದಿಂದ ಸ್ಥಗಿತಗೊಂಡಿದ್ದು, ಗುರುವಾರ ಮತ್ತು ಶುಕ್ರವಾರ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಕಾರ್ಯ ಸ್ಥಗಿತಗೊಂಡಿದೆ. ತಾಂತ್ರಿಕ ದೋಷವು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡನ್ನೂ ನಿಷ್ಕ್ರಿಯಗೊಳಿಸಿದೆ. ಇದರಿಂದಾಗಿ ಸಾವಿರಾರು ಅರ್ಜಿದಾರರು ಪರೆದಾಡುವಂತಾಗಿದೆ.

ವರದಿ ಪ್ರಕಾರ, ಪ್ರಸ್ತುತ ಸಮಸ್ಯೆಯ ಕುರಿತು ಪಾಸ್‌ಪೋರ್ಟ್ ಸೇವಾ ಗ್ರಾಹಕ ಬೆಂಬಲ ಸಹಾಯವಾಣಿಯನ್ನ ಸಂಪರ್ಕಿಸಿದಾಗ ಸಮಸ್ಯೆ ಇರುವುದು ತಿಳಿದು ಬಂದಿದೆ. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ V1.0 (PSP V1.0) ನಿಂದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ V2.0 (PSP V2.0) ಗೆ ನಡೆಯುತ್ತಿರುವ ವೆಬ್‌ಸೈಟ್‌ ಮೈಗ್ರೇಷನ್‌ ನಡೆಯುತ್ತಿರುವುದರಿಂದ ಈ ಸಮಸ್ಯೆ ಎದುರಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

passport (1)

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರಸ್ತುತ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ V1.0 (PSP V1.0) ನಿಂದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ V2.0 (PSP V2.0) ಗೆ ವಲಸೆ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ. ಇದನ್ನು ಏಪ್ರಿಲ್ 2024 ರಿಂದ ಹಂತ ಹಂತವಾಗಿ ಮಾಡಲಾಗುತ್ತಿದೆ. PSP V2.0 ನಾಗರಿಕರಿಗೆ ಪಾಸ್‌ಪೋರ್ಟ್ ಸಂಬಂಧಿತ ಸೇವೆಗಳನ್ನು ತ್ವರಿತ, ಅನುಕೂಲಕರ ಮತ್ತು ಪಾರದರ್ಶಕ ರೀತಿಯಲ್ಲಿ ತಲುಪಿಸಲು ನವೀಕರಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಸುಧಾರಿತ ಕ್ರಮಗಳನ್ನು ತರುವ ನಿರೀಕ್ಷೆ ಇದೆ.

ಹಲವು ಅರ್ಜಿದಾರರು ಎಕ್ಸ್‌ನಲ್ಲಿ ಈ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇವಾ ಪೋರ್ಟ್‌ ಈ ಕುರಿತು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.ಈ ಬಗ್ಗೆ ಅರ್ಜಿದಾರರಿಗೆ ಯಾವುದೇ SMS,ಇಮೇಲ್ ಅಥವಾ ಫೋನ್ ಕರೆಯನ್ನು ಮೂಲಕ ವಿಷಯವನ್ನು ತಿಳಿಸಲಾಗಲಿಲ್ಲ. ಸೇವಾ ಕೇಂದ್ರವನ್ನು ತಲುಪಿದ ನಂತರವೇ ಜನರಿಗೆ ವಿಷಯ ತಿಳಿಯುತ್ತಿದೆ ಎಂದು ಹಲವರು ದೂರಿದ್ದಾರೆ. ನಾಳೆ ಬೆಳಿಗ್ಗೆ ನನ್ನ ಮಕ್ಕಳ ಪಾಸ್‌ಪೋರ್ಟ್‌ಗಳಿಗೆ ಅಪಾಯಿಂಟ್‌ಮೆಂಟ್ ಇತ್ತು, ಮತ್ತು ಎರಡು ತಿಂಗಳಲ್ಲಿ ಎರಡನೇ ಬಾರಿಗೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಇದು ಮುಂದೂಡಲ್ಪಟ್ಟಿದೆ ಎಂದು ಅರ್ಜಿದಾರರೊಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸ್ಥಗಿತವು ತುರ್ತು ಪ್ರಯಾಣ ಯೋಜನೆಗಳನ್ನು ಹೊಂದಿರುವವರಿಗೆ ತುಂಬಾ ಸಮಸ್ಯೆಯನ್ನು ನೀಡುತ್ತಿದೆ. ಅನೇಕ ವಿದ್ಯಾರ್ಥಿಗಳು, ವಿದೇಶ ಪ್ರವಾಸ ಕೈಗೊಳ್ಳುವವರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಸ್‌ಪೋರ್ಟ್ ಸೇವಾ ವ್ಯವಸ್ಥೆಯು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ, ಪಾಸ್‌ಪೋರ್ಟ್ ಸೇವೆಯಲ್ಲಿ ಇದೇ ರೀತಿಯ ಸರ್ವರ್ ಡೌನ್‌ ಆಗಿತ್ತು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!