ಉತ್ತರಾಖಂಡ ಪ್ರವಾಸೋದ್ಯಮದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ಪ್ರಧಾನಿಯವರು ಉತ್ತರಾಖಂಡದ ಔಲಿ, ಮುನ್ಸಿಯಾರಿ, ದಯಾರಾ ಬುಗ್ಯಾಲ್, ಚೋಪ್ತಾ ಮುಂತಾದ ಪ್ರದೇಶಗಳು ಶೀತಕಾಲದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿರುವುದನ್ನು ʼಮನ್ ಕೀ ಬಾತ್ʼ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದರು. ಹಿಮ ಮತ್ತು ಪ್ರಕೃತಿಯ ಅನನ್ಯ ಸೌಂದರ್ಯ, ಟ್ರೆಕ್ಕಿಂಗ್ ಅವಕಾಶಗಳು, ವನ್ಯಜೀವಿ ವೀಕ್ಷಣೆ ಹಾಗೂ ಹಳ್ಳಿಗಳ ಸಂಸ್ಕೃತಿ - ಈ ಎಲ್ಲವುಗಳು ಉತ್ತರಾಖಂಡವನ್ನು ವಿಂಟರ್ ಟೂರಿಸಂನ ಹಾಟ್‌ಸ್ಪಾಟ್ ಆಗಿ ಮಾಡಿವೆ ಎಂದು ಅವರು ಅಭಿಪ್ರಾಯಪಟ್ಟರು.
“ಮನ್ ಕಿ ಬಾತ್” ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ರಾಜ್ಯದ ವಿಂಟರ್ ಟೂರಿಸಂ ಸಾಮರ್ಥ್ಯವನ್ನು ವಿಶೇಷವಾಗಿ ಹೈಲೈಟ್ ಮಾಡಿ ಮಾತನಾಡಿದರು. ಹಿಮಾಚ್ಛಾದಿತ ಪರ್ವತಗಳು, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಹಳ್ಳಿಗಳು ಮತ್ತು ಹೊಸ ಪ್ರವಾಸೋದ್ಯಮ ಮಾರ್ಗಗಳು ರಾಜ್ಯವನ್ನು ‘ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ತಾಣ’ವನ್ನಾಗಿ ರೂಪಿಸುತ್ತಿವೆ ಎಂದು ಅವರು ಹೇಳಿದರು.
ಪ್ರಧಾನಿಯವರು ಉತ್ತರಾಖಂಡದ ಔಲಿ, ಮುನ್ಸಿಯಾರಿ, ದಯಾರಾ ಬುಗ್ಯಾಲ್, ಚೋಪ್ತಾ ಮುಂತಾದ ಪ್ರದೇಶಗಳು ಶೀತಕಾಲದಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿರುವುದನ್ನು ಉಲ್ಲೇಖಿಸಿದರು. ಹಿಮ ಮತ್ತು ಪ್ರಕೃತಿಯ ಅನನ್ಯ ಸೌಂದರ್ಯ, ಟ್ರೆಕ್ಕಿಂಗ್ ಅವಕಾಶಗಳು, ವನ್ಯಜೀವಿ ವೀಕ್ಷಣೆ ಹಾಗೂ ಹಳ್ಳಿಗಳ ಸಂಸ್ಕೃತಿ—ಈ ಎಲ್ಲವುಗಳು ಉತ್ತರಾಖಂಡವನ್ನು ವಿಂಟರ್ ಟೂರಿಸಂನ ಹಾಟ್‌ಸ್ಪಾಟ್ ಆಗಿ ಮಾಡಿವೆ ಎಂದು ಅವರು ಅಭಿಪ್ರಾಯಪಟ್ಟರು.

ವಿಂಟರ್ ಟೂರಿಸಂಗೆ ಉತ್ತೇಜನ ನೀಡಲು, ಪಿಥೋರಾಗಢ ಜಿಲ್ಲೆಯ ಅಡಿ ಕೈಲಾಶ್ ಪ್ರದೇಶದಲ್ಲಿ ನಡೆದ ಹೈ-ಆಲ್ಟಿಟ್ಯೂಡ್ ಮ್ಯಾರಥಾನ್ ಅನ್ನು ಕೂಡ ಮೋದಿ ಪ್ರಶಂಸಿಸಿದರು. ಸುಮಾರು 14,500 ಅಡಿ ಎತ್ತರದಲ್ಲಿ ನಡೆದ ಈ ‘ಅಡಿ ಕೈಲಾಶ್ ಮ್ಯಾರಥಾನ್ ರನ್’ ನಲ್ಲಿ 18 ರಾಜ್ಯಗಳಿಂದ 750ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ರಾಜ್ಯ ಸರಕಾರವು ರಸ್ತೆ ಸಂಪರ್ಕ ವಿಸ್ತರಣೆ, ಹೋಮ್‌ಸ್ಟೇ ಯೋಜನೆಗಳು, ಸ್ಥಳೀಯ ಉದ್ಯಮಗಳಿಗೆ ಬೆಂಬಲ ಹಾಗೂ ಹೊಸ ಪ್ರವಾಸ ಮಾರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಈ ಪ್ರಯತ್ನಗಳು ಉತ್ತರಾಖಂಡದ ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ನೀಡಲಿವೆ ಎಂದು ಮೋದಿ ಅಭಿಪ್ರಾಯಪಟ್ಟರು.