Sunday, October 19, 2025
Sunday, October 19, 2025

ನಾಳೆಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆ

ದೇಶದ ಅತಿ ಪುರಾತನ ಆಚರಣೆಗಳಲ್ಲಿಒಂದಾಗಿರುವ ಪುರಿ ರಥಯಾತ್ರೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು, ಜನರ ನಿರ್ವಹಣೆಗಾಗಿ ರಾಷ್ಟ್ರೀಯ ಭದ್ರತಾ ಪಡೆ ಸಿಬ್ಬಂದಿ ಇದೇ ಮೊದಲ ಬಾರಿಗೆ ನಿಯೋಜನೆ ಗೊಂಡಿದ್ದಾರೆ.

ಪುರಿ: ಒಡಿಶಾದ ಜಗತ್ಪಸಿದ್ದ ಧಾರ್ಮಿಕ ಕ್ಷೇತ್ರ ಪುರಿ ಜಗನ್ನಾಥನ ವಾರ್ಷಿಕ ರಥ ಯಾತ್ರೆ ಶುಕ್ರವಾರ ಆರಂಭವಾಗಲಿದ್ದು, ಸಕಲ ಸಿದ್ದತೆಗಳು ನಡೆಯುತ್ತಿವೆ. ಈ ಬಾರಿಯ ರಥಯಾತ್ರೆಗೆ ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಪುರಿಯಾದ್ಯಂತ 10,000 ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಚಾಲಿತ 250 ಸಿಸಿಟಿವಿ ಕ್ಯಾಮರಾಗಳ ನಗರದಲ್ಲಿ ಅಳವಡಿಸಲಾಗಿದೆ.

ದೇಶದ ಅತಿ ಪುರಾತನ ಆಚರಣೆಗಳಲ್ಲಿಒಂದಾಗಿರುವ ಪುರಿ ರಥಯಾತ್ರೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು, ಜನರ ನಿರ್ವಹಣೆಗಾಗಿ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಸಿಬ್ಬಂದಿ ಇದೇ ಮೊದಲ ಬಾರಿಗೆ ನಿಯೋಜನೆ ಗೊಂಡಿದ್ದಾರೆ. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ರಥಯಾತ್ರೆಗೆ ಈ ವರ್ಷ‌ ಎಐ ಚಾಲಿತ 250 ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿ, ಹೆಚ್ಚುವರಿ ಭದ್ರತೆ ನೀಡುತ್ತಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

puri new

ಪುರಿ-ಕೊನಾರ್ಕ್ ಹಾಗೂ ಪುರಿ-ಉತ್ತರ ಛಾಕ್ ನಡುವೆ ಒಟ್ಟು 275 ಸಿಸಿಟಿವಿ ಅಳವಡಿಸಲಾಗಿದ್ದು, ದೃಶ್ಯಾವಳಿ ಬಗ್ಗೆ 24 ಗಂಟೆಯೂ ನಿಗಾ ವಹಿಸಲಾಗಿದೆ. ಜತೆಗೆ ಕಟ್ಟಡಗಳ ಮೇಲೆ ಎನ್ ಎಸ್‌ಜಿ ಸೈಪರ್‌ಗಳನ್ನು ನಿಯೋಜಿಸಲಾಗಿದೆ. ಡೋನ್, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳೂ ಸ್ಥಳದಲ್ಲಿವೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!