Wednesday, September 9, 2026
Wednesday, September 9, 2026

ವೈದ್ಯಕೀಯ ಪ್ರವಾಸೋದ್ಯಮ ಸಾಧನೆಗೆ ಗೌರವ

ಭಾರತದ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿನಾನ್‌ ಹೆಲ್ತ್‌ಕೇರ್‌ಗೆ ಸಂಜೀವನಿ 2026ರಲ್ಲಿ ಎರಡು ಪ್ರಮುಖ ಗೌರವಗಳು ಲಭಿಸಿವೆ.

ಭಾರತದ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿನಾನ್‌ ಹೆಲ್ತ್‌ಕೇರ್‌ಗೆ ಸಂಜೀವನಿ 2026ರಲ್ಲಿ ಎರಡು ಪ್ರಮುಖ ಗೌರವಗಳು ಲಭಿಸಿವೆ.

‘MVT Facilitator of the Year’ ಮತ್ತು ‘Most Transformative Medical Value Travel Company of the Year’ ಪ್ರಶಸ್ತಿಗಳನ್ನು ಸಂಸ್ಥೆ ಪಡೆದಿದೆ. ಭಾರತ ಸರಕಾರದ ವಾಣಿಜ್ಯ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಬೆಂಬಲದೊಂದಿಗೆ ನಡೆದ ಸಂಜೀವನಿ 2026ರಲ್ಲಿ ದೇಶದ ಆರೋಗ್ಯ ಮತ್ತು ಮೆಡಿಕಲ್ ವ್ಯಾಲ್ಯೂ ಟ್ರಾವೆಲ್ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.

18ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿನಾನ್‌, 50ಕ್ಕೂ ಅಧಿಕ ರಾಷ್ಟ್ರೀಯತೆಗಳ ರೋಗಿಗಳಿಗೆ ವೈದ್ಯಕೀಯ ನೆರವು ಒದಗಿಸುತ್ತಿದೆ. ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಸೂಕ್ತ ಆಸ್ಪತ್ರೆ ಆಯ್ಕೆ, ಪ್ರಯಾಣ, ವಿಮಾನ ನಿಲ್ದಾಣದ ನೆರವು, ವಸತಿ, ಭಾಷಾಂತರ ಮತ್ತು ಚಿಕಿತ್ಸೆ ನಂತರದ ಆರೈಕೆಯವರೆಗೆ ಸೇವೆ ನೀಡುತ್ತಿದೆ.

‘ಹೀಲ್ ಇನ್ ಇಂಡಿಯಾ’ ಪರಿಕಲ್ಪನೆಗೆ ಅನುಗುಣವಾಗಿ ಭಾರತೀಯ ಆರೋಗ್ಯ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ತಲುಪಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಇಥಿಯೋಪಿಯಾ, ಉಜ್ಬೇಕಿಸ್ತಾನ ಮತ್ತು ಮ್ಯಾನ್ಮಾರ್ ಸೇರಿದಂತೆ ಹಲವು ದೇಶಗಳಲ್ಲಿ ಶಸ್ತ್ರಚಿಕಿತ್ಸಾ ಶಿಬಿರಗಳು ಹಾಗೂ ಆರೋಗ್ಯ ಸೇವಾ ಯೋಜನೆಗಳ ಮೂಲಕ ಭಾರತೀಯ ವೈದ್ಯಕೀಯ ಪರಿಣತಿಯನ್ನು ವಿದೇಶಗಳಿಗೂ ಕೊಂಡೊಯ್ಯುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!