ಮಾಜಿ ಮುಖ್ಯಮಂತ್ರಿ ದಿ. ಸಾರೆಕೊಪ್ಪ ಬಂಗಾರಪ್ಪ ಅವರ 93ನೇ ಜನ್ಮದಿನದ ಪ್ರಯುಕ್ತ, ಅ. 26ಕ್ಕೆ ವಿಚಾರ ಸಂಕೀರ್ಣ, ಜನ್ಮ ದಿನೋತ್ಸವ, ಬಂಗಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆಯಲಿವೆ.

ಬೆಳಗ್ಗೆ ವಿಚಾರ ಸಂಕೀರ್ಣ

ಬೆಳಗ್ಗೆ 10:30ಕ್ಕೆ ಸೊರಬದ ಡಾ. ರಾಜ್‌ಕುಮಾರ್‌ ರಂಗಮಂದಿರದಲ್ಲಿ ಆರಂಭವಾಗಲಿರುವ ವಿಚಾರ ಸಂಕಿರ್ಣಕ್ಕೆ, ಪ್ರೊ. ಎಸ್‌.ಜಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಸಾಹಿತಿ ಡಾ.ಕಾಳೇಗೌಡ ನಾಗಾವರ, ಮೈಸೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಸ್ಥಿರ ಬದುಕು- ಪ್ರಸ್ತುತತೆ ವಿಷಯದ ಕುರಿತು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರು ಹೆಚ್‌.ಎಲ್‌ ಪುಷ್ಪ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್‌ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಡಾ. ಮಂಜುನಾಥ ವಿಚಾರ ಮಂಡನೆ ಮಾಡಲಿದ್ದಾರೆ.

ಆಳ್ವಾಸ್‌ ಸಾಂಸ್ಕೃತಿಕ ವೈಭವ

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ಕಲಾ ತಂಡದಿಂದ ʻಆಳ್ವಾಸ್‌ ಸಾಂಸ್ಕೃತಿಕ ವೈಭವʼ ಕಾರ್ಯಕ್ರಮಗಳು ಸೊರಬದ ರಾಜ್‌ಕುಮಾರ್‌ ರಂಗಮಂದಿರದ ಎದುರಿನ ಆವರಣದಲ್ಲಿ ನಡೆಯಲಿವೆ.

ಎಸ್‌. ಬಂಗಾರಪ್ಪ ಅವರ ಜನ್ಮದಿನೋತ್ಸವ

ಬಂಗಾರಧಾಮ

ಸಾರೆಕೊಪ್ಪ ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸ್ಮಾರಕ ಉದ್ಯಾನ ಬಂಗಾರಧಾಮದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5ಗಂಟೆಗೆ ʻಬಂಗಾರ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಚಿವ ಕೆ.ಎಚ್‌ ಮುನಿಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ʻಬಂಗಾರ ಪ್ರಶಸ್ತಿʼ ಪುರಸ್ಕೃತರು

ಸಾಹಿತ್ಯ ಬಂಗಾರ: ಕನ್ನಡ ಸಾಹಿತಿ ಮತ್ತು ನಿವೃತ್ತ ಪ್ರಾಧ್ಯಾಪಕ, ಡಾ. ಕಾಳೆಗೌಡ ನಾಗಾವರ. ಮೈಸೂರು

ಜಾನಪದ ಬಂಗಾರ: ಚೌಡಿಕೆ ಕಲಾವಿದೆ, ರಾಧಾಭಾಯಿ ಮಾದರ್‌

ಧರ್ಮ ಬಂಗಾರ: ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಪರವಾಗಿ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕರು ಎಲ್‌. ರೇವಣಸಿದ್ದಯ್ಯ

ಕಲಾ ಬಂಗಾರ: ರಂಗಭೂಮಿ ಕಲಾವಿದ ಜೇವರ್ಗಿ ರಾಜಣ್ಣ