ಹಿಂದೂ ಮಹಾಸಾಗರದಲ್ಲಿರುವ ಸುಂದರ ದ್ವೀಪ ರಾಷ್ಟ್ರ ಸೀಶೆಲ್ಸ್ 2026ರ ವೇಳೆಗೆ ಭಾರತದಿಂದ 15,000 ಪ್ರವಾಸಿಗರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಭಾರತವು ಸೀಶೆಲ್ಸ್‌ಗೆ ಪ್ರಮುಖ ಪ್ರವಾಸೋದ್ಯಮ ಮಾರುಕಟ್ಟೆಯಾಗಿದ್ದು, ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ.

Untitled design - 2026-07-17T113329.768

ಸೀಶೆಲ್ಸ್ ಪ್ರವಾಸೋದ್ಯಮ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಶೆರಿನ್ ಫ್ರಾನ್ಸಿಸ್ ಅವರ ಪ್ರಕಾರ, 2025ರಿಗಿಂತ ಸುಮಾರು 12 ಶೇಕಡಾ ಹೆಚ್ಚಳ ಸಾಧಿಸುವ ಉದ್ದೇಶ ಹೊಂದಿದ್ದು, ಭಾರತೀಯ ಪ್ರವಾಸಿಗರ ಹೆಚ್ಚುತ್ತಿರುವ ವಿದೇಶ ಪ್ರವಾಸ ಆಸಕ್ತಿ, ಕಡಿಮೆ ದೂರದ ಐಷಾರಾಮಿ ಪ್ರವಾಸಗಳಿಗೆ ಇರುವ ಬೇಡಿಕೆ ಹಾಗೂ ಸುಧಾರಿತ ವಿಮಾನ ಸಂಪರ್ಕಗಳು ಈ ಗುರಿ ಸಾಧಿಸಲು ನೆರವಾಗಲಿವೆ.

ಹಿಂದೆ ಸೀಶೆಲ್ಸ್ ಅನ್ನು ಹನಿಮೂನ್ ಹಾಗೂ ಐಷಾರಾಮಿ ಕಡಲತೀರ ಪ್ರವಾಸಕ್ಕೆ ಮಾತ್ರ ಸೀಮಿತವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕುಟುಂಬಗಳು, ಸ್ನೇಹಿತರ ಗುಂಪುಗಳು, ಮದುವೆ ಸಮಾರಂಭಗಳು ಹಾಗೂ ವಿಶೇಷ ಆಚರಣೆಗಳಿಗಾಗಿ ಸಹ ಈ ತಾಣವನ್ನು ಭಾರತೀಯರು ಆಯ್ಕೆ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಸೀಶೆಲ್ಸ್ ಪ್ರವಾಸೋದ್ಯಮ ಮಂಡಳಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಚಾರವನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ.

ಇದನ್ನೂ ಓದಿ: ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಛಾಯಾಗ್ರಾಹಕರು ಮತ್ತು ಪ್ರವಾಸಿ ಮಾರ್ಗದರ್ಶಿಗಳ ಪಾತ್ರವೇ ಪ್ರಮುಖ

ಇದೇ ವೇಳೆ, ಕಡಲತೀರಗಳಷ್ಟೇ ಅಲ್ಲದೆ ಪ್ರಕೃತಿ, ಸಾಹಸ ಪ್ರವಾಸ, ಜಲಕ್ರೀಡೆ, ಸಂಸ್ಕೃತಿ ಮತ್ತು ಸ್ಥಳೀಯ ಅನುಭವಗಳನ್ನು ಒಳಗೊಂಡ ವೈವಿಧ್ಯಮಯ ಪ್ರವಾಸ ಉತ್ಪನ್ನಗಳನ್ನು ಭಾರತೀಯ ಪ್ರವಾಸಿಗರಿಗೆ ಪರಿಚಯಿಸುವತ್ತಲೂ ಸೀಶೆಲ್ಸ್ ಹೆಚ್ಚಿನ ಒತ್ತು ನೀಡುತ್ತಿದೆ.