ಗ್ಯಾಂಗ್ಟಾಕ್–ಬಾಗಡೋಗ್ರಾ ನಡುವೆ ಸಂಚರಿಸುವ ಹೆಲಿಕಾಪ್ಟರ್ ದರ ಇಳಿಕೆ
ಈ ದರ ಬದಲಾವಣೆ ಡಿಸೆಂಬರ್ 1, 2025 ರಿಂದ ಜಾರಿಯಾಗಿದ್ದು, ಪ್ರವಾಸಿಗರು ತಕ್ಷಣವೇ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಪರ್ವತಗಳ ರಾಜ್ಯವೆಂದು ಖ್ಯಾತಿ ಪಡೆದಿರುವ ಸಿಕ್ಕಿಂನ ಪ್ರವಾಸೋದ್ಯಮ ಇಲಾಖೆ ಗ್ಯಾಂಗ್ಟಾಕ್ ಮತ್ತು ಬಾಗಡೋಗ್ರಾ ನಡುವಿನ ಹೆಲಿಕಾಪ್ಟರ್ ಸೇವೆಯ ದರವನ್ನು ಕಡಿತಗೊಳಿಸಿದೆ. ಈ ಮೊದಲು ಪ್ರತಿ ಪ್ಯಾಸೆಂಜರ್‌ಗೆ ರು 4,500 ನಿಗದಿಯಾಗಿತ್ತು, ಈಗ ಆ ದರವನ್ನು ರು 3,100 ಕ್ಕೆ ಇಳಿಸಲಾಗಿದೆ.
ಈ ದರ ಬದಲಾವಣೆ ಡಿಸೆಂಬರ್ 1, 2025 ರಿಂದ ಜಾರಿಯಾಗಿದ್ದು, ಪ್ರವಾಸಿಗರು ತಕ್ಷಣವೇ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಹಾಗೆಯೇ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುವವರಿಗೆ ಹೊಸ ಬ್ಯಾಗೇಜ್ ನೀತಿಯನ್ನು ಕೂಡ ರೂಪಿಸಲಾಗಿದೆ. ಪ್ರತಿ ಪ್ರಯಾಣಿಕ 7 ಕೆ.ಜಿ. ಮಟ್ಟದ ಬ್ಯಾಗೇಜ್ ಉಚಿತವಾಗಿ ಕೊಂಡೊಯ್ಯಬಹುದು. ಬ್ಯಾಗೇಜ್‌ನ ತೂಕ 8–15 ಕೆ.ಜಿ. ವರಗೆ ಇದ್ದರೆ ಪ್ರತಿ ಕೆ.ಜಿ. ಗೆ ರು 50 ಹೆಚ್ಚುವರಿ ಶುಲ್ಕ ಪಾವತಿಸಬೇಕು ಮತ್ತು 15 ಕೆ.ಜಿ. ಮೀರಿದರೆ ಪ್ರತಿ ಕೆ.ಜಿ. ಗೆ ರು 500 ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದೆ.