5.74 ಲಕ್ಷ ರು. ಬಿಲ್ ಕಟ್ಟಲು ಕ್ಯಾತೆ ತೆಗೆದ ಗ್ರಾಹಕರು!
ಹೊಟೇಲ್‌ನ ಸೇವೆಗಳು ಅಥವಾ ಒಟ್ಟು ಮೊತ್ತದ ವಿಚಾರದಲ್ಲಿ ಕುಟುಂಬದವರಿಗೆ ಹಾಗೂ ನಿರ್ವಹಣಾ ಸಿಬ್ಬಂದಿಗೆ ಮಾತಿನ ಚಕಮಕಿ ನಡೆದಿದ್ದು, ವರದಿಗಳ ಪ್ರಕಾರ ಬಿಲ್ ಪಾವತಿ ಮಾಡುವಾಗ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ.
ರಾಜಸ್ಥಾನದ ಉದಯ್‌ಪುರದಲ್ಲಿರುವ ವಿಶ್ವಪ್ರಸಿದ್ಧ ಐಷಾರಾಮಿ ರೆಸಾರ್ಟ್ 'ಒಬೆರಾಯ್ ಉದಯ್‌ವಿಲಾಸ್' ಹೊಟೇಲ್‌ನಲ್ಲಿ 10 ದಿನಗಳ ಕಾಲ ತಂಗಿದ ದೆಹಲಿಯ ಕುಟುಂಬವೊಂದು, ಚೆಕ್‌ಔಟ್ ಮಾಡುವ ವೇಳೆ ಹೊಟೇಲ್ ನೀಡಿದ ಬರೋಬ್ಬರಿ ₹5.74 ಲಕ್ಷ ಬಿಲ್ ಅನ್ನು ಪಾವತಿಸಲು ನಿರಾಕರಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.
ಇದನ್ನೂ ಓದಿ: 2029ರ ವೇಳೆಗೆ 400 ಹೊಟೇಲ್‌ಗಳ ಗುರಿ: ಸರೋವರ್ ಹೊಟೇಲ್ಸ್
ಪಿಚೋಲಾ ಸರೋವರದ ದಡದಲ್ಲಿರುವ ಅತ್ಯಂತ ದುಬಾರಿ ಹಾಗೂ ವಿಶ್ವಮಟ್ಟದ ಪಂಚತಾರಾ ರೆಸಾರ್ಟ್ ಆಗಿರುವ ಒಬೆರಾಯ್ ಉದಯ್‌ವಿಲಾಸ್‌ನಲ್ಲಿ ದೆಹಲಿಯಿಂದ ಬಂದಿದ್ದ ಕುಟುಂಬವೊಂದು 10 ದಿನಗಳ ಕಾಲ ತಂಗಿತ್ತು. ವಾಸ್ತವ್ಯ ಮುಗಿಸಿ ಹೊರಡುವ ಸಮಯದಲ್ಲಿ ಹೊಟೇಲ್ ಆಡಳಿತ ಮಂಡಳಿಯು ರೂಮ್ ಬಾಡಿಗೆ, ಊಟೋಪಚಾರ ಹಾಗೂ ಇತರ ಐಷಾರಾಮಿ ಸೌಲಭ್ಯಗಳನ್ನು ಸೇರಿಸಿ ಒಟ್ಟು 5,74,000 ರು. ಬಿಲ್ ಮೊತ್ತವನ್ನು ಪಾವತಿಸುವಂತೆ ಕೋರಿದೆ. ಆದರೆ, ಈ ಹಣವನ್ನು ನೀಡಲು ಕುಟುಂಬದವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಹೊಟೇಲ್‌ನ ಸೇವೆಗಳು ಅಥವಾ ಒಟ್ಟು ಮೊತ್ತದ ವಿಚಾರದಲ್ಲಿ ಕುಟುಂಬದವರಿಗೆ ಹಾಗೂ ನಿರ್ವಹಣಾ ಸಿಬ್ಬಂದಿಗೆ ಮಾತಿನ ಚಕಮಕಿ ನಡೆದಿದ್ದು, ವರದಿಗಳ ಪ್ರಕಾರ ಬಿಲ್ ಪಾವತಿ ಮಾಡುವಾಗ ಇಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಇಂಥ ಹೈ-ಪ್ರೊಫೈಲ್ ಪಾವತಿ ವಿವಾದಗಳು ಅಪರೂಪವಾಗಿದ್ದು, ಪ್ರಸ್ತುತ ಇದು ಪ್ರವಾಸೋದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಘಟನೆಯ ಕುರಿತು ಹೋಟೆಲ್ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರು ಮುಂದಿನ ಕಾನೂನು ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.