ವಿಶ್ವದ ಮೊದಲ ರಾಮಾಯಣ ವಿಷಯಾಧಾರಿತ ಮೇಣದ ವಸ್ತು ಸಂಗ್ರಹಾಲಯ
ಅಯೋಧ್ಯೆಯು ಸಾಂಪ್ರದಾಯಿಕ ದಕ್ಷಿಣ ಭಾರತ ವಾಸ್ತುಶಿಲ್ಪ ಶೈಲಿಯಲ್ಲಿನ ರಾಮಾಯಣ ಮೇಣದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದೆ. ಇದು ವಿಶ್ವದಲ್ಲೇ ಮೊದಲ ರಾಮಾಯಣ-ವಿಷಯದ ಮೇಣದ ವಸ್ತುಸಂಗ್ರಹಾಲಯವಾಗಿದೆ. ಹಾಗೆಯೇ ಇದು ಎರಡು ಅಂತಸ್ತಿನ ವಸ್ತು ಸಂಗ್ರಹಾಲಯವಾಗಿದ್ದು, 50 ಜೀವಂತ ಮೇಣದ ಪ್ರತಿಮೆಗಳನ್ನು ಹೊಂದುವ ಮೂಲಕ ರಾಮಾಯಣದ ದೃಶ್ಯಗಳನ್ನು ಮತ್ತಷ್ಟು ಜೀವಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪ್ರಪಂಚದಾದ್ಯಂತ ಹೆಸರು ಮಾಡಿರುವ ಅಯೋಧ್ಯೆಯ ರಾಮ ಮಂದಿರ ಸಂಸ್ಕೃತಿ, ಕಲೆ, ನಂಬಿಕೆಗಳ ಪ್ರವಾಸೋದ್ಯಮವನ್ನು ಬೆಳೆಸುವ ಸಲುವಾಗಿ ಮತ್ತೊಂದು ನೂತನ ಕಾರ್ಯಕ್ಕೆ ಸಜ್ಜಾಗಿದೆ. ಹೌದು, ಅಯೋಧ್ಯೆಯು ಸಾಂಪ್ರದಾಯಿಕ ದಕ್ಷಿಣ ಭಾರತ ವಾಸ್ತುಶಿಲ್ಪ ಶೈಲಿಯಲ್ಲಿನ ರಾಮಾಯಣ ಮೇಣದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದೆ. ಇದು ವಿಶ್ವದಲ್ಲೇ ಮೊದಲ ರಾಮಾಯಣ-ವಿಷಯದ ಮೇಣದ ವಸ್ತುಸಂಗ್ರಹಾಲಯವಾಗಿದೆ. ಇದು ಎರಡು ಅಂತಸ್ತಿನ ವಸ್ತು ಸಂಗ್ರಹಾಲಯವಾಗಿದ್ದು, 50 ಪ್ರಮುಖ ಮೇಣದ ಪ್ರತಿಮೆಗಳನ್ನು ಹೊಂದುವ ಮೂಲಕ ರಾಮಾಯಣದ ದೃಶ್ಯಗಳನ್ನು ಮತ್ತಷ್ಟು ಜೀವಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಸಂಗ್ರಹಾಲಯವು ಸುಮಾರು 9,850 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಭಕ್ತಿಯ ಕೇಂದ್ರ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ವಿನ್ಯಾಸಗೊಳಿಸಲಾದ ಈ ವಸ್ತುಸಂಗ್ರಹಾಲಯವು ತ್ರೇತಾಯುಗದಲ್ಲಿ ನಡೆಯುವ ರಾಮಾಯಣಕ್ಕೆ ನೇರವಾಗಿ ಭೇಟಿ ನೀಡುವ ಅನುಭವ ನೀಡಲಿದೆ. ರಾಮಾಯಣದ ಪ್ರಮುಖ ಪಾತ್ರಗಳಾದ ರಾಮ, ಸೀತಾ ಮಾತೆ, ಲಕ್ಷ್ಮಣ, ಭರತ, ಹನುಮಾನ್, ರಾವಣ ಮತ್ತು ವಿಭೀಷಣ ಹೀಗೆ ಅನೇಕ ಮೇಣದ ಪ್ರತಿಮೆಗಳನ್ನು ಒಳಗೊಂಡು ಪೂರ್ಣಗೊಂಡಿರುವ ಈ ವಸ್ತುಸಂಗ್ರಹಾಲಯವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಂಬತ್ತನೇ ದೀಪೋತ್ಸವ ಆಚರಣೆಯ ಸಂದರ್ಭದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.