Saturday, July 18, 2026
Saturday, July 18, 2026

ಎರಡನೆಯ ದರ್ಜೆಯ ಪ್ರಯಾಣಿಕ ಎಂಬ ಪದ ಬಳಕೆ ನಿಲ್ಲಿಸಿ

ಎರಡನೆಯ ದರ್ಜೆಯ ಪ್ರಯಾಣಿಕ ಎಂಬ ಪದ ಬಳಕೆ ನಿಲ್ಲಿಸಿ ಎಂದು ರೈಲ್ವೇ ಇಲಾಖೆಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಭಾರತೀಯ ರೈಲ್ವೇ ಇಲಾಖೆ ತನ್ನ ಅಧಿಕೃತ ದಾಖಲೆಗಳು ಮತ್ತು ಕೈಪಿಡಿಗಳಲ್ಲಿ ಬಳಸುತ್ತಿರುವ 'Second Class Passenger' (ಎರಡನೆಯ ದರ್ಜೆಯ ಪ್ರಯಾಣಿಕ) ಎಂಬ ಪದಪ್ರಯೋಗವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

‘ದರ್ಜೆ’ ಎಂಬ ಪದವು ಪ್ರಯಾಣಿಕನಿಗೆ ಅಲ್ಲ, ಬದಲಿಗೆ ಆತ ಪ್ರಯಾಣಿಸುವ ಬೋಗಿಗೆ ಸಂಬಂಧಿಸಿರಬೇಕು ಎಂದು ನ್ಯಾಯಾಲಯ ತಿಳಿಸಿದೆ.

Untitled design - 2026-07-18T163844.963

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಭಾರತದಲ್ಲಿನ ವರ್ಗಭೇದದ ಐತಿಹಾಸಿಕ ಹಿನ್ನೆಲೆಯನ್ನು ಗಮನಿಸಿದರೆ, 'ಎರಡನೆಯ ದರ್ಜೆಯ ಪ್ರಯಾಣಿಕ' ಎಂಬ ಪದವು ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ. ಆದ್ದರಿಂದ, 'Second Class Coach' (ಎರಡನೆಯ ದರ್ಜೆಯ ಬೋಗಿ) ಎಂಬ ರೀತಿಯ ಪದ ಬಳಕೆ ಸೂಕ್ತ ಎಂದು ನ್ಯಾಯಾಲಯ ಸೂಚಿಸಿದೆ.

ಈ ಅಭಿಪ್ರಾಯವು 2015ರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ಪ್ರಯಾಣಿಕನ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕರಣದ ವಿಚಾರಣೆ ವೇಳೆ ವ್ಯಕ್ತವಾಯಿತು. ಮೃತನ ಬಳಿ ಟಿಕೆಟ್ ಪತ್ತೆಯಾಗದ ಕಾರಣ ಪರಿಹಾರ ನಿರಾಕರಿಸಲಾಗಿತ್ತು. ಆದರೆ, ಟಿಕೆಟ್ ಸಿಕ್ಕಿಲ್ಲ ಎನ್ನುವುದರಿಂದ ಆತ ಅಧಿಕೃತ ಪ್ರಯಾಣಿಕನಲ್ಲ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿ, ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿತು. ಜತೆಗೆ, ರೈಲ್ವೇಯ ಸುರಕ್ಷತಾ ಜವಾಬ್ದಾರಿಯಷ್ಟೇ ಪ್ರಯಾಣಿಕರೂ ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ನ್ಯಾಯಾಲಯ ತಿಳಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!