ಥೈಲ್ಯಾಂಡ್‌ನ ಮಾಜಿ ರಾಣಿ ಸಿರಿಕಿಟ್ (93) ಅವರ ನಿಧನದ ಹಿನ್ನೆಲೆ ಸರಕಾರ ರಾಷ್ಟ್ರಾದ್ಯಂತ ಶೋಕಾಚರಣೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ ದೇಶದಾದ್ಯಂತ ಶಾಂತ ಹಾಗೂ ಗೌರವಯುತ ವಾತಾವರಣ ಕಾಪಾಡಲು ಸರಕಾರ ಜನಸಾಮಾನ್ಯರ ಜತೆಗೆ ಪ್ರವಾಸಿಗರಿಗೂ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

Thailand Tourism


ಸರಕಾರದ ನಿರ್ದೇಶನದ ಪ್ರಕಾರ, ಪ್ರವಾಸಿಗರು ಈ ಅವಧಿಯಲ್ಲಿ ಮೆರುಗುಳ್ಳ ಬಟ್ಟೆ, ಚುಕ್ಕಿ ಬಣ್ಣದ ಉಡುಪು ಅಥವಾ ಆಕರ್ಷಕ ವಸ್ತ್ರಧಾರಣೆಯನ್ನು ಮಾಡಬಾರದು. ವಿಶೇಷವಾಗಿ ರಾಜಭವನಗಳು, ಅಧಿಕೃತ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳ ಸುತ್ತಮುತ್ತ, ಪ್ರವಾಸಿಗರು ಗೌರವಪೂರ್ಣ ನಡವಳಿಕೆಯನ್ನು ತೋರಬೇಕು ಎಂದು ಮನವಿ ಮಾಡಲಾಗಿದೆ.

ಅದೇ ರೀತಿ, ಪ್ರವಾಸಿಗರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಶೋಕಾವಧಿಯ ನಿಯಮಗಳನ್ನು ಗೌರವಿಸುವಂತೆ ಸೂಚಿಸಲಾಗಿದೆ. ಕೆಲವು ದೇವಾಲಯಗಳು ಮತ್ತು ಧಾರ್ಮಿಕ ತಾಣಗಳಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ಸಹಕರಿಸಬೇಕಾಗಿ ಕೋರಲಾಗಿದೆ.