ಪ್ರವಾಸೋದ್ಯಮದ ತ್ವರಿತ ಬೆಳವಣಿಗೆಯಿಂದಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸಲು, ಥೈಲ್ಯಾಂಡ್ ಸೇರಿದಂತೆ ಜಪಾನ್, ನಾರ್ವೇ, ಗ್ರೀಸ್, ಇಟಲಿ ಮತ್ತು ಸ್ಪೇನ್ ದೇಶಗಳು 2026ರಿಂದ ಹೊಸ ಪ್ರವಾಸೋದ್ಯಮ ತೆರಿಗೆಗಳನ್ನು ಜಾರಿಗೆ ತರಲು ನಿರ್ಧರಿಸಿವೆ. ಈ ಯೋಜನೆಯು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜತೆಗೆ ಸ್ಥಳೀಯ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪತ್ತನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ.

Thailand tourism (1)


ಥೈಲ್ಯಾಂಡ್ ಸರ್ಕಾರವು ಪ್ರತಿ ವಿದೇಶಿ ಪ್ರವಾಸಿಗರಿಂದ ಹೆಚ್ಚುವರಿ ತೆರಿಗೆ ವಸೂಲಿ ಮಾಡಲು ಯೋಜನೆ ರೂಪಿಸಿದ್ದು, ಇದರ ಮೂಲಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕೈಗೊಳ್ಳುವುದು, ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ಅಗತ್ಯ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವುದು ಮತ್ತು ಪರಿಸರ ಸಂರಕ್ಷಣೆಗೆ ನಿಧಿ ಸಂಗ್ರಹಿಸುವ ಯೋಜನೆ ಹೊಂದಿದೆ. ಇತರ ರಾಷ್ಟ್ರಗಳಾದ ಜಪಾನ್, ನಾರ್ವೇ, ಗ್ರೀಸ್, ಇಟಲಿ ಮತ್ತು ಸ್ಪೇನ್ ಕೂಡ ಇದೇ ಮಾದರಿಯ ತೆರಿಗೆ ನೀತಿಗಳನ್ನು ಅನುಸರಿಸಲು ಸಜ್ಜಾಗಿವೆ.

ಈ ರೀತಿಯ ಕ್ರಮವು ಓವರ್‌ ಟೂರಿಸಂ(Over tourism)ನಿಂದ ಉಂಟಾಗುತ್ತಿರುವ ಹಾನಿಯನ್ನು ಸರಿಪಡಿಸಿ, ಪ್ರವಾಸಿಗರಲ್ಲಿ ರೆಸ್ಪಾನ್ಸಿಬಲ್‌ ಟೂರಿಸ್ಟ್‌ (Responsible tourist) ಮನೋಭಾವವನ್ನು ಬೆಳೆಸಿ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಕಾರಿಯಾಗಿದೆ.