ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ʼದಿ ಗ್ರೇಟ್ ರೈಡ್ ಆಫ್ ಕರ್ನಾಟಕʼ
ಕರ್ನಾಟಕ, ಕೇರಳಕ್ಕೆ ಸೇರಿದ ಮಾಧ್ಯಮ ಪ್ರತಿನಿಧಿಗಳು ಮತ್ತು ಇನ್‌ಫುಯೆನ್ಸರ್‌ಗಳು, ರಾಯಲ್ ಎನ್ ಫೀಲ್ಡ್ ತಂತ್ರಜ್ಞರು ಭಾಗವಿಸಿದ್ದ ಮೂರು ದಿನಗಳ ʼದಿ ಗ್ರೇಟ್ ರೈಡ್ ಆಫ್ ಕರ್ನಾಟಕʼ ವನ್ನು ರಾಯಲ್ ಎನ್‌ಫೀಲ್ಡ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದೇ ಮೊದಲ ಬಾರಿಗೆ ಜಂಟಿಯಾಗಿ ಆಯೋಜಿಸಿತ್ತು.
ರಾಯಲ್ ಎನ್‌ಫೀಲ್ಡ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದೇ ಮೊದಲ ಬಾರಿಗೆ ಜಂಟಿಯಾಗಿ ʼದಿ ಗ್ರೇಟ್ ರೈಡ್ ಆಫ್ ಕರ್ನಾಟಕʼ ಆಯೋಜಿಸಿತ್ತು. ದಿ ಗ್ರೇಟ್ ರೈಡ್ ಆಫ್ ಕರ್ನಾಟಕದಲ್ಲಿ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650, ರಾಯಲ್ ಎನ್‌ಫೀಲ್ಡ್ ಗೋವನ್ ಕ್ಲಾಸಿಕ್ ,ಕ್ಲಾಸಿಕ್ 350 ಮತ್ತು ಮಿಟಿಯೋರ್ 350 ಸೇರಿ ಒಟ್ಟು 17 ಬೈಕುಗಳು, 17 ಬೈಕರ್‌ಗಳು ಭಾಗವಹಿಸಿದ್ದರು. ವಿಶೇಷವಾಗಿ ಈ ರೈಡ್‌ನಲ್ಲಿ ಕರ್ನಾಟಕ, ಕೇರಳಕ್ಕೆ ಸೇರಿದ ಮಾಧ್ಯಮ ಪ್ರತಿನಿಧಿಗಳು ಮತ್ತು ಇನ್‌ಫುಯೆನ್ಸರ್‌ಗಳ ತಂಡದ ಜತೆಗೆ ಅತ್ಯಂತ ಸಮರ್ಥ ರಾಯಲ್ ಎನ್ ಫೀಲ್ಡ್ ತಂತ್ರಜ್ಞರು ಸಹ ಭಾಗವಿಸಿದ್ದ ಮೂರು ದಿನಗಳ ಈ ರೈಡನ್ನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಡಾ. ರಾಜೇಂದ್ರ ಕೆ.ವಿ.ಯವರು ಶುಭ ಹಾರೈಸಿ ಕಳುಹಿಸಿದ್ದರು.

ಮೊದಲ ದಿನ ಬೆಂಗಳೂರಿನ ವಿಧಾನಸೌಧದಿಂದ ಹೊರಟ ಬೈಕರ್ಸ್ ಸಂಜೆಯ ವೇಳೆಗೆ ಹಂಪಿ ತಲುಪಿ, ನಂತರ ವಿಜಯವಿಠಲ, ವಿರೂಪಾಕ್ಷ ದೇಗುಲಕ್ಕೆ ಭೇಟಿ ಕೊಟ್ಟು ಅಲ್ಲಿನ ಐತಿಹ್ಯ ತಿಳಿದುಕೊಂಡು ಮೊದಲ ದಿನವನ್ನು ಸಾರ್ಥಕಗೊಳಿಸಿದರು. ಮರುದಿನ ಚಿಕ್ಕಮಗಳೂರಿನ ತಿರುವುಗಳ ಹಾದಿಯಲ್ಲಿ ಗದ್ದೆ, ತೋಟ ದಾಟಿ ಮುಳ್ಳಯ್ಯನ ಗಿರಿಯತ್ತ ಪ್ರಯಾಣ ಬೆಳೆಸಿದರು. ಮೂರನೇ ದಿನ ಬೇಲೂರು, ಚೆನ್ನಕೇಶವನ ಭೇಟಿಯ ನಂತರ ಅಲ್ಲಿಂದ ಬೆಂಗಳೂರಿಗೆ ಮರಳಿದರು. ಒಟ್ಟಿನಲ್ಲಿ ಬೈಕರ್‌ಗಳಿಗೆ ಕರ್ನಾಟಕದ ಪರಂಪರೆಯನ್ನು ಪರಿಚಯಿಸುವುದು ಹಾಗೂ ಕರ್ನಾಟಕದ ಗ್ರಾಮೀಣ ಭಾಗದ ಮಕ್ಕಳಲ್ಲಿ ಬೈಕಿಂಗ್ ಸಂಸ್ಕೃತಿಯನ್ನು ತಿಳಿಸಿಕೊಡುವ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ಈ ದಿ ಗ್ರೇಟ್ ರೈಡ್ ಯಶಸ್ವಿಯಾಯಿತು.