ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಡ್ ಸೇತುವೆ ಎಂಬ ಹೆಗ್ಗಳಿಕೆಗೆ ಶರಾವತಿ ನದಿಯ ಹಿನ್ನೀರಿನಲ್ಲಿ ಸಾಗರದ ಕಳಸವಳ್ಳಿ- ಅಂಬಾರಗೋಡ್ಲು ನಡುವೆ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ ಪಾತ್ರವಾಗಿದೆ. ಬಹುನಿರೀಕ್ಷಿತ ಈ ಸೇತುವೆಯು ಜು.14ರ ವೇಳೆಗೆ ಲೋಕಾರ್ಪಣೆಗೆ ಸಿದ್ಧವಾಗಿತ್ತು. ಆದರೆ ಸೇತುವೆ ಉದ್ಘಾಟನಾ ಸಮಾರಂಭದ ದಿನಾಂಕವು ವಿಪರೀತ ಮಳೆಯಿಂದಾಗಿ ಹಾಗೂ ಸಮಾರಂಭಕ್ಕೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸುವ ಆಶಯದಿಂದಲೂ ಮುಂದೂಡಲು ಚಿಂತಿಸಲಾಗಿದೆ.

sigandhur bridge

ಸುಮಾರು 423 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯ ಕೊನೆಯ ಹಂತದ ಕಾಮಗಾರಿಗಳು ನಿರಂತರ ಮಳೆಯಿಂದಾಗಿ ವಿಳಂಬವಾಗಿದೆ. ದೇಶದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಹೆಲಿಕಾಪ್ಟರ್‌ ಗಳು ಬರಲು ಪೂರಕ ಹವಾಮಾನದ ಅಗತ್ಯವು ಇದೆ. ಅಲ್ಲದೆ ಜುಲೈ 21ರಿಂದ ಸಂಸತ್‌ ಅಧಿವೇಶನವೂ ಆರಂಭವಾಗುವುದರಿಂದ ಆಗಸ್ಟ್ 15ರ ನಂತರ ಸೇತುವೆ ಉದ್ಗಾಟನೆ ಸಮಾರಂಭ ನಡೆಸುವ ಸಾಧ್ಯತೆ ಇದೆ.