ಜಾಗತಿಕ ಮಟ್ಟದಲ್ಲಿ ಈಗ ಮಸಾಲೆ ದೋಸೆಯ ರುಚಿ
ವಿಶ್ವದ ವಿವಿಧ ಮೂಲೆಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ರೇಟಿಂಗ್ ಆಧಾರದ ಮೇಲೆ ಮಸಾಲ ದೋಸೆಗೆ 43 ಸ್ಟಾರ್ ರೇಟಿಂಗ್ ನೀಡಲಾಗಿದೆ. ಮಸಾಲ ದೋಸೆಯ ಗರಿಗರಿಯಾದ ವಿನ್ಯಾಸ, ಒಳಗಿನ ಮಸಾಲೆಭರಿತ ಆಲೂಗೆಡ್ಡೆ ಪಲ್ಯ ಮತ್ತು ಅದನ್ನು ಚಟ್ನಿ-ಸಾಂಬಾರ್ ಜತೆಗೆ ಸವಿಯುವ ಶೈಲಿಯನ್ನು ಟೇಸ್ಟ್ ಅಟ್ಲಾಸ್ ವಿಶೇಷವಾಗಿ ಶ್ಲಾಘಿಸಿದೆ.
ದಕ್ಷಿಣ ಭಾರತದ ಹೆಮ್ಮೆಯ ಆಹಾರವಾದ ಮಸಾಲ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಪ್ರಸಿದ್ಧ ಅಂತಾರಾಷ್ಟ್ರೀಯ ಆಹಾರ ಮಾರ್ಗದರ್ಶಿ 'ಟೇಸ್ಟ್ ಅಟ್ನಾಸ್' ಪ್ರಕಟಿಸಿರುವ ವಿಶ್ವದ 50 ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಮಸಾಲ ದೋಸೆಗೆ 6ನೇ ಸ್ಥಾನ ಲಭಿಸಿದೆ.
ವಿಶ್ವದ ವಿವಿಧ ಮೂಲೆಗಳ ಆಹಾರ ಪ್ರಿಯರು ಮತ್ತು ವಿಮರ್ಶಕರು ನೀಡಿರುವ ರೇಟಿಂಗ್ ಆಧಾರದ ಮೇಲೆ ಮಸಾಲ ದೋಸೆಗೆ 43 ಸ್ಟಾರ್ ರೇಟಿಂಗ್ ನೀಡಲಾಗಿದೆ. ಮಸಾಲ ದೋಸೆಯ ಗರಿಗರಿಯಾದ ವಿನ್ಯಾಸ, ಒಳಗಿನ ಮಸಾಲೆಭರಿತ ಆಲೂಗೆಡ್ಡೆ ಪಲ್ಯ ಮತ್ತು ಅದನ್ನು ಚಟ್ನಿ-ಸಾಂಬಾರ್ ಜತೆಗೆ ಸವಿಯುವ ಶೈಲಿಯನ್ನು ಟೇಸ್ಟ್ ಅಟ್ಲಾಸ್ ವಿಶೇಷವಾಗಿ ಶ್ಲಾಘಿಸಿದೆ. ವಿಶ್ವದಾದ್ಯಂತ ಇರುವ ವಿವಿಧ ಬಗೆಯ ತಿಂಡಿಗಳನ್ನು ಹಿಂದಿಕ್ಕಿ, ಮಸಾಲ ದೋಸೆ ಈ ಸ್ಥಾನವನ್ನು ಅಲಂಕರಿಸಿರುವ ಮೂಲಕ ಭಾರತೀಯ ಆಹಾರ ಪದ್ಧತಿಯ ಖ್ಯಾತಿಯನ್ನು ಹೆಚ್ಚಿಸಿದೆ.