ಸೋಷಿಯಲ್ ಮೀಡಿಯಾ ಮೂಲಕ ಬುಕಿಂಗ್ ಮಾಡಲು ಭಯವಂತೆ
ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಆಕರ್ಷಕ ರೀಲ್ಸ್ ಹಾಗೂ ಇನ್‌ಫ್ಲುಯೆನ್ಸರ್‌ಗಳ ಶಿಫಾರಸುಗಳನ್ನು ನೋಡಿ ಜನರು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರೂ, ಅಂತಿಮವಾಗಿ ಬುಕಿಂಗ್ ಮಾಡುವ ಹಂತದಲ್ಲಿ ಶೇಕಡಾವಾರು ಗ್ರಾಹಕರು ಹಿಂದೆ ಸರಿಯುತ್ತಿದ್ದಾರೆ.
ಇನ್‌ಸ್ಟಾಗ್ರಾಮ್, ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳ ಮೂಲಕ ಪ್ರವಾಸ ಹಾಗೂ ಹೊಟೇಲ್ ಬುಕಿಂಗ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದ್ದರೂ, ಗ್ರಾಹಕರಲ್ಲಿ ಮಾತ್ರ ಇನ್ನೂ ಭದ್ರತೆ ಮತ್ತು ವಿಶ್ವಾಸದ ಕೊರತೆ ಕಾಡುತ್ತಿದೆ ಎಂದು ಹೊಸದಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ. ಪ್ರವಾಸೋದ್ಯಮ ಮತ್ತು ಪ್ರಯಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಾಹಕರ ಮನೋಭಾವವನ್ನು ಅಧ್ಯಯನ ಮಾಡಿರುವ ಈ ಸಮೀಕ್ಷೆಯು, ಆನ್‌ಲೈನ್ ಮೂಲಕ ಹಣ ಪಾವತಿಸಿ ಟಿಕೆಟ್ ಕಾಯ್ದಿರಿಸುವಾಗ ಎದುರಾಗುವ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಇದನ್ನೂ ಓದಿ: ವಿದೇಶಿ ಟ್ರಾವೆಲರ್ ಮುಂಬೈ-ಗೋವಾ ರೈಲು ಪಯಣದ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಆಕರ್ಷಕ ರೀಲ್ಸ್ ಹಾಗೂ ಇನ್‌ಫ್ಲುಯೆನ್ಸರ್‌ಗಳ ಶಿಫಾರಸುಗಳನ್ನು ನೋಡಿ ಜನರು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರೂ, ಅಂತಿಮವಾಗಿ ಬುಕಿಂಗ್ ಮಾಡುವ ಹಂತದಲ್ಲಿ ಶೇಕಡಾವಾರು ಗ್ರಾಹಕರು ಹಿಂದೆ ಸರಿಯುತ್ತಿದ್ದಾರೆ. ನಕಲಿ ವೆಬ್‌ಸೈಟ್‌ಗಳು, ಆನ್‌ಲೈನ್ ವಂಚನೆಗಳು, ವೈಯಕ್ತಿಕ ಹಾಗೂ ಬ್ಯಾಂಕ್ ಮಾಹಿತಿಯ ಸೋರಿಕೆ ಭೀತಿ ಮತ್ತು ಬುಕಿಂಗ್ ಮಾಡಿದ ನಂತರ ಯಾವುದೇ ಗ್ರಾಹಕ ಸೇವೆ ಸಿಗದಿರುವ ಆತಂಕವೇ ಈ ಹಿಂಜರಿಕೆಗೆ ಪ್ರಮುಖ ಕಾರಣ ಎಂದು ವರದಿ ಸ್ಪಷ್ಟಪಡಿಸಿದೆ.
ಸಮೀಪದಲ್ಲಿ ಪಾಲ್ಗೊಂಡಿದ್ದ ಬಹುತೇಕ ಪ್ರಯಾಣಿಕರು ರಜೆ ಅಥವಾ ಪ್ರವಾಸದ ಯೋಜನೆಯ ಆರಂಭಿಕ ಹಂತದಲ್ಲಿ ಕೇವಲ ಕಲ್ಪನೆ ಹಾಗೂ ಸ್ಫೂರ್ತಿಗಾಗಿ ಮಾತ್ರ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆಯೇ ಹೊರತು, ವಿಶ್ವಾಸಾರ್ಹ ಅಧಿಕೃತ ಟ್ರಾವೆಲ್ ಪೋರ್ಟಲ್‌ಗಳು ಅಥವಾ ನೇರ ಏರ್‌ಲೈನ್ಸ್ ವೆಬ್‌ಸೈಟ್‌ಗಳ ಮೂಲಕವೇ ಬುಕಿಂಗ್ ಮಾಡಲು ಆದ್ಯತೆ ನೀಡುತ್ತಾರೆ ಎಂದು ಸಮೀಪದಿಂದ ತಿಳಿದುಬಂದಿದೆ. ಆನ್‌ಲೈನ್ ವಂಚನೆಗಳನ್ನು ತಡೆಯಲು ಮತ್ತು ಗ್ರಾಹಕರ ವಿಶ್ವಾಸವನ್ನು ಮರುಗಳಿಸಲು ಟ್ರಾವೆಲ್ ಕಂಪನಿಗಳು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳು ಹೆಚ್ಚು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.