ಇನ್ಮುಂದೆ ಉಬರ್ ಆ್ಯಪ್‌ನಲ್ಲೇ ರೈಲು ಟಿಕೆಟ್ ಬುಕಿಂಗ್
ಭಾರತದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಉಬರ್, ಇದೀಗ ತನ್ನ ಆ್ಯಪ್ ಮೂಲಕವೇ ರೈಲು ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ.
ಭಾರತದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಉಬರ್, ಇದೀಗ ತನ್ನ ಆ್ಯಪ್ ಮೂಲಕವೇ ರೈಲು ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಇದಕ್ಕಾಗಿ ಉಬರ್, ಪ್ರವಾಸೋದ್ಯಮ ಹಾಗೂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸಂಸ್ಥೆ ಇಕ್ಸಿಗೋ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಹೊಸ ಸೇವೆಯ ಮೂಲಕ ಪ್ರಯಾಣಿಕರು ರೈಲುಗಳನ್ನು ಹುಡುಕಿ ಟಿಕೆಟ್ ಬುಕ್ ಮಾಡುವುದರ ಜೊತೆಗೆ ಪಿಎನ್‌ಆರ್ ಸ್ಥಿತಿಯನ್ನೂ ಪರಿಶೀಲಿಸಬಹುದು.
ಉಬರ್ ಆ್ಯಪ್‌ನಲ್ಲಿರುವ ‘Bus & Train’ ವಿಭಾಗ ಅಥವಾ ‘Services’ ಆಯ್ಕೆಯ ಮೂಲಕ ಈ ಸೌಲಭ್ಯವನ್ನು ಬಳಸಬಹುದು. ಪ್ರಯಾಣಿಕರು ಪ್ರಯಾಣದ ಆರಂಭಿಕ ಮತ್ತು ಅಂತಿಮ ನಿಲ್ದಾಣ ಹಾಗೂ ದಿನಾಂಕ ನಮೂದಿಸಿ ಲಭ್ಯವಿರುವ ರೈಲುಗಳನ್ನು ಪರಿಶೀಲಿಸಿ ಟಿಕೆಟ್ ಬುಕ್ ಮಾಡಬಹುದು. ಬುಕಿಂಗ್ ನಂತರ ಟಿಕೆಟ್ ವಿವರಗಳು ಮತ್ತು ಪಿಎನ್‌ಆರ್ ಮಾಹಿತಿಯನ್ನೂ ಆ್ಯಪ್‌ನಲ್ಲೇ ನೋಡಬಹುದು.
ರೈಲು ಪ್ರಯಾಣದ ಜತೆಗೆ ನಿಲ್ದಾಣಕ್ಕೆ ತೆರಳಲು ಅಥವಾ ಗಮ್ಯಸ್ಥಾನದ ರೈಲು ನಿಲ್ದಾಣದಿಂದ ಮುಂದಿನ ಪ್ರಯಾಣಕ್ಕೆ ಉಬರ್ ರೈಡ್‌ನ್ನೂ ಬುಕ್ ಮಾಡಬಹುದು. ಹೀಗಾಗಿ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ‘ಫಸ್ಟ್ ಮೈಲ್’ ಮತ್ತು ‘ಲಾಸ್ಟ್ ಮೈಲ್’ ಪ್ರಯಾಣದವರೆಗೆ ಒಂದೇ ಆ್ಯಪ್‌ನಲ್ಲಿ ನಿರ್ವಹಿಸುವ ಅವಕಾಶ ದೊರೆಯಲಿದೆ.