ಗಂಗಾ ತೀರದಲ್ಲಿ ವಾರದ ಆರೋಗ್ಯ–ಯೋಗ ಕಾರ್ಯಕ್ರಮ
ಉತ್ತರಾಖಂಡದ ಹರಿದ್ವಾರದ ಗಂಗಾ ತೀರದಲ್ಲಿರುವ ಪರಂಪರೆಯ ಆತಿಥ್ಯ ಕೇಂದ್ರ ಅಮೃತ್ ಭವನ ಜುಲೈ 25ರಿಂದ ಆಗಸ್ಟ್ 1ರವರೆಗೆ ‘ಎ ವೀಕ್ ಆಫ್ ವೆಲ್‌ನೆಸ್ ಬೈ ದ ಗಂಗಾ’ ಎಂಬ ವಿಶೇಷ ವಾರಪೂರ್ತಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮವನ್ನು ಆಯೋಜಿಸಿದೆ.
ಉತ್ತರಾಖಂಡದ ಹರಿದ್ವಾರದ ಗಂಗಾ ತೀರದಲ್ಲಿರುವ ಪರಂಪರೆಯ ಆತಿಥ್ಯ ಕೇಂದ್ರ ಅಮೃತ್ ಭವನ ಜುಲೈ 25ರಿಂದ ಆಗಸ್ಟ್ 1ರವರೆಗೆ ‘ಎ ವೀಕ್ ಆಫ್ ವೆಲ್‌ನೆಸ್ ಬೈ ದ ಗಂಗಾ’ ಎಂಬ ವಿಶೇಷ ವಾರಪೂರ್ತಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮವನ್ನು ಆಯೋಜಿಸಿದೆ. ಮಳೆಗಾಲದಲ್ಲಿ ಆರೋಗ್ಯ, ವಿಶ್ರಾಂತಿ ಹಾಗೂ ಆಧ್ಯಾತ್ಮಿಕ ಅನುಭವಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಪ್ರತಿದಿನ ಯೋಗಾಭ್ಯಾಸ, ವೈಯಕ್ತಿಕ ಪೌಷ್ಟಿಕಾಂಶ ಸಲಹೆಗಳು, ಆಯುರ್ವೇದ ಕುರಿತ ಜ್ಞಾನ ಸತ್ರಗಳು, ಮಸಾಜ್ ಚಿಕಿತ್ಸೆಗಳು, ಆರೋಗ್ಯಕರ ಆಹಾರ, ಕರುಳಿನ ಆರೋಗ್ಯ, ಹರ್ಬಲ್ ಪಾನೀಯಗಳು ಹಾಗೂ ಸಮಗ್ರ ಆರೋಗ್ಯ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.

ಸಂಜೆ ವೇಳೆಯಲ್ಲಿ ಖಾಸಗಿ ಘಾಟ್‌ನಲ್ಲಿ ಗಂಗಾ ಆರತಿ, ಧ್ಯಾನ, ಸೌಂಡ್ ಹೀಲಿಂಗ್, ಯೋಗ ನಿದ್ರೆ, ಹೆರಿಟೇಜ್ ವಾಕ್ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ. ತಂಗುವ ಅವಧಿಯನ್ನು ಲೆಕ್ಕಿಸದೆ ಎಲ್ಲ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇಬ್ಬರು ವಯಸ್ಕರಿಗೆ ಪ್ರತಿ ರಾತ್ರಿ 14,440 ರು. (ಜಿಎಸ್‌ಟಿ ಹೊರತುಪಡಿಸಿ)ದಿಂದ ಪ್ಯಾಕೇಜ್ ಆರಂಭವಾಗುತ್ತದೆ. ಆರೋಗ್ಯ ಪ್ರವಾಸೋದ್ಯಮದ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ.