ಝಗಮಗಿಸುವ ಕ್ಯಾಸಿನೊಗಳು, ಐಷಾರಾಮಿ ಹೊಟೇಲ್ ಗಳು ಮತ್ತು ಮನರಂಜನಾ ಸ್ಥಳಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಲಾಸ್‌ ವೇಗಸ್ ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕೆನಡಾ ಮತ್ತು ಮೆಕ್ಸಿಕೊ ದಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಈ ಬೆಳವಣಿಗೆ ಲಾಸ್ ವೇಗಸ್ ನ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು, ಅತಿಯಾದ ನಷ್ಟವನ್ನುಂಟುಮಾಡಿದೆ ಎಂದು ಮೇಯರ್ ಶೆಲ್ಲಿ ಬರ್ಕ್ಲಿ ತಿಳಿಸಿರು. ಲಾಸ್ ವೇಗಸ್ ಅಲ್ಲದೇ ಅಮೆರಿಕಾದ ಇತರ ನಗರಗಳು ಕೂಡ ಪ್ರವಾಸಿಗರ ಭೇಟಿಯಿಲ್ಲದೆ ಕಳೆಗುಂದಿವೆ.

ಈ ಕುಸಿತಕ್ಕೆ ಅಮೆರಿಕದ ಆರ್ಥಿಕ ಅನಿಶ್ಚಿತತೆ, ರಾಜಕೀಯ ಉದ್ವಿಗ್ನತೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ನೀತಿಗಳು ಕಾರಣವಾಗಿರುವ ಸಾಧ್ಯತಯಿದೆ. ಹೀಗಾಗಿ ಲಾಸ್ ವೇಗಸ್‌ನ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಮರಳಿ ಆಕರ್ಷಿಸಲು ಸರ್ಕಾರ "ವೆಲ್ಕಮ್ ಟು ಫ್ಯಾಬ್ಯುಲಸ್ ಲಾಸ್ ವೇಗಸ್" ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.