ಮೈಸೂರು ಮೃಗಾಲಯದ ವತಿಯಿಂದ 2025ರ ವನ್ಯಜೀವಿ ಸಪ್ತಾಹದ ಆಚರಣೆ ಹಿನ್ನೆಲೆ ಅ.2ರಿಂದ 8ರವರೆಗೆ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಸ್ಪರ್ಧೆ ಮತ್ತು ಪ್ರದರ್ಶನವು ಎರಡು ವರ್ಗಗಳಲ್ಲಿ ನಡೆಯಲಿದ್ದು, ವನ್ಯಜೀವಿ ಪ್ರವರ್ಗ ಮತ್ತು ವನ್ಯಜೀವಿ ಮೃಗಾಲಯ ಪ್ರವರ್ಗಗಳಿವೆ. ಪ್ರತಿ ವರ್ಗದಲ್ಲಿ 2 ನಗದು ಬಹುಮಾನ ಮತ್ತು 3 ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.

ಆಸಕ್ತರು ಛಾಯಾಚಿತ್ರಗಳನ್ನು ಸೆ.8 ರಿಂದ 18 ರವರೆಗೆ ಬೆಳಗ್ಗೆ10 ರಿಂದ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬಹುದು. ಛಾಯಾಚಿತ್ರಗಳನ್ನು ಸಲ್ಲಿಸಲು ಸೆ.18 ಕೊನೆಯ ದಿನಾಂಕ. ಸಾಫ್ಟ್ ಕಾಪಿಯನ್ನು educationmysuruzoo. org ಇ-ಮೇಲ್‌ಗೆ ಕಳುಹಿಸಬೇಕು. ಪ್ರತಿ ಛಾಯಾಚಿತ್ರದ ಸಾಫ್ಟ್ ಕಾಪಿ 5 ಎಂ.ಬಿ. ಗಿಂತ ಹೆಚ್ಚು ಇರಬಾರದು. 1920x1080 ರೆಸೆಲ್ಯೂಷನ್ ಹೊಂದಿರಬೇಕು. ಇಲ್ಲಿ ತೀರ್ಪುಗಾರರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ.

ಇದರ ಜತೆಗೆ ಅ.2 ರಿಂದ 8 ರ ವರೆಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ www.mysuruzoo.info ಭೇಟಿ ನೀಡಲು ಪ್ರಕಟಣೆಯಲ್ಲಿ ತಿಳಿಸಿದೆ.